ICC T20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು ಅಫ್ಘಾನಿಸ್ತಾನ 66 ರನ್ಗಳ ಸೋಲನುಭವಿಸಿದೆ. ಆದರೆ ಈ ಸೋಲಿಗೆ ಅಸಲಿ ಕಾರಣ ಏನೆಂಬುದನ್ನು ಅಫ್ಘಾನ್ ತಂಡದ ಸ್ಪಿನ್ನರ್ ರಶೀದ್ ಖಾನ್ ವಿವರಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಬ್ಯಾಟಿಂಗ್ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಮಾಡುವುದು ಕಷ್ಟವಾಗಬಹುದು ಎಂದು ನಿರ್ಧರಿಸಿದ್ದೆವು. ಇದರಿಂದಾಗಿಯೇ ಬ್ಯಾಟಿಂಗ್ ಬದಲು ಬೌಲಿಂಗ್ ಆಯ್ಕೆ ಮಾಡಿಕೊಂಡೆವು. ಆದರೆ ನಮ್ಮ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದವು ಎಂದು ಹೇಳಿದ್ದಾರೆ.
ವೈಫಲ್ಯ ಅನುಭವಿಸಿದ್ದ ಭಾರತದ ಬ್ಯಾಟರ್ಗಳ ಮೇಲೆ ದಾಳಿ ನಡೆಸಲು ನಿರ್ಧಿರಿಸಿದ್ದೆವು. ಇದರಲ್ಲಿ ನಾವು ಯಶಸ್ವಿಯಾಗಿದ್ದರೆ ಖಂಡಿತ ಈ ಪಂದ್ಯವನ್ನು ಗೆಲ್ಲುತ್ತಿದ್ದೆವು. ಆದರೆ ಟೀಮ್ ಇಂಡಿಯಾದ ಆಟಗಾರರು ವೃತ್ತಿಪರರು. ಅವರು ನಮ್ಮನ್ನು ಪಂದ್ಯದ ಯಾವುದೇ ಹಂತದಲ್ಲಿ ಮರಳುವುದಕ್ಕೆ ಬಿಡಲಿಲ್ಲ ಎಂದರು.
ಇದನ್ನೂ ಓದಿ: ‘ಹೀಗೆ ಮಾಡಿದ್ರೆ ಮಾತ್ರ ಟೀಂ ಇಂಡಿಯಾ ಗೆಲ್ಲಲು ಸಾಧ್ಯ’- ಸೆಹ್ವಾಗ್ ಕೊಟ್ಟ ಸಲಹೆಯೇನು?