ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಶ್ರೀಲಂಕಾ​​ ಬ್ಯಾಟಿಂಗ್ ಆಯ್ತುಕೊಂಡಿದೆ. ಕೊಲೊಂಬಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಟೀಮ್​ ಇಂಡಿಯಾವನ್ನ ಶಿಖರ್​ ಧವನ್​ ಮುನ್ನಡೆಸುತ್ತಿದ್ರೆ, ಲಂಕಾ ತಂಡಕ್ಕೆ ದಸುನ್​ ಶನಕ ನಾಯಕತ್ವ ವಹಿಸಿಕೊಂಡಿದ್ದಾರೆ.

ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿ.ಕೀ), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಕುಲದೀಪ್ ಯಾದವ್

ಶ್ರೀಲಂಕಾ ತಂಡ: ಅವಿಷ್ಕಾ ಫರ್ನಾಂಡೋ, ಮಿನೋದ್ ಭಾನುಕಾ (ವಿ.ಕೀ), ಭಾನುಕಾ ರಾಜಪಕ್ಸ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನ, ಇಸುರು ಉಡಾನ, ದುಷ್ಮಾಂತ ಚಮೀರಾ, ಲಕ್ಷ್ಮಣ್​ ಸಂದಕನ್​.

ಸೂರ್ಯಕುಮಾರ್ ಯಾದವ್, ಇಶಾನ್​ ಕಿಶಾನ್​ ಏಕದಿನ ಕ್ರಿಕೆಟ್​ ಪದಾರ್ಪಣೆ ಮಾಡಿದ್ದಾರೆ. ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಈ ಟ್ಯಾಲೆಂಟೆಡ್​ ಪ್ಲೇಯರ್ಸ್​, ಒಣ್​ಡೇ ಕ್ಯಾಪ್​ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್​ ವಿರುದ್ಧ ಟಿ20 ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್, ಕಿಶಾನ್​ ಏಕದಿನ ಕ್ರಿಕೆಟ್​ಗೂ ಕ್ಯಾಪ್​​ ಪಡೆದುಕೊಂಡ್ರು.

ಕೊನೆಯದಾಗಿ 2017ರಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ನಾಲ್ಕು ವರ್ಷಗಳ ಬಳಿಕ ಸೆಣಸಾಟ ನಡೆಸಲಿವೆ. ಈ ಸರಣಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಲ್ಲಿ ಭಾರತ ಗೆದ್ದಿತ್ತು. ಇನ್ನು ಮೊದಲ ಬಾರಿಗೆ ನಾಯಕತ್ವ ಜವಾಬ್ದಾರಿ ಹೊತ್ತಿರುವ ಶಿಖರ್​​ ಧವನ್​ಗೆ, ಇದು ಪ್ರತಿಷ್ಠಿತ ಸರಣಿಯಾಗಿ ಮಾರ್ಪಟ್ಟಿದೆ. ಜೊತೆಗೆ ಟಿ20 ವಿಶ್ವಕಪ್​ ದೃಷ್ಟಿಯಿಂದ ಆಟಗಾರರಿಗೆ ಮಹತ್ವದ ಸರಣಿಯಾಗಿದೆ.

The post ಇಂಡೋ-ಲಂಕಾ ಏಕದಿನ: ಟಾಸ್​​ ಗೆದ್ದ ಶ್ರೀಲಂಕಾ, ಸೂರ್ಯ-ಇಶಾನ್​ ಪದಾರ್ಪಣೆ appeared first on News First Kannada.

Source: newsfirstlive.com

Source link