ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ T20 ಸರಣಿ ಇಂದಿನಿಂದ ಶುರುವಾಗಲಿದೆ. ಈ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮರಳುವ ಕುರಿತು ಮಾತನಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಬಹಳ ಪ್ರಮುಖ ಆಟಗಾರ. ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಕೊಡುಗೆ ನೀಡುತ್ತಾರೆ. ಹಾರ್ದಿಕ್ ಅತ್ಯುತ್ತಮ ಫಾರ್ಮ್ ಮೂಲಕ ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದರು.
ಇನ್ನು, ಪಾಂಡ್ಯ ಬ್ಯಾಟ್ಸ್ಮನ್ ಆಗಿ ಆಡಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ಟೀಮ್ ಮ್ಯಾನೇಜ್ಮೆಂಟ್ ತೀರ್ಮಾನ ಮಾಡುತ್ತೆ. ಆದರೆ ಪ್ರತಿಯೊಬ್ಬ ಆಟಗಾರನು ಸಂಪೂರ್ಣವಾಗಿ ಫಿಟ್ ಆಗಿರಬೇಕು ಎಂದು ಹೇಳಿದರು.
The post ಇಂಡೋ-ವಿಂಡೀಸ್ T20 ಸರಣಿ.. ಹಾರ್ದಿಕ್ ಕಮ್ಬ್ಯಾಕ್ ಬಗ್ಗೆ ರೋಹಿತ್ ಹೇಳಿದ್ದೇನು..? appeared first on News First Kannada.