‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’: ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಮಾತು | Shivarajkumar talks about Coffee Nadu Chandu on Dance Karnataka Dance Zee Kannada show


Shivarajkumar | Coffee Nadu Chandu: ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂದು ಕಾಫಿ ನಾಡು ಚಂದು ಎಲ್ಲಿಲ್ಲದ ಸರ್ಕಸ್​ ಮಾಡಿದ್ದರು. ಕಡೆಗೂ ಜೀ ಕನ್ನಡ ವೇದಿಕೆ ಮೂಲಕ ಅವರ ಆಸೆ ಈಡೇರಿದೆ.

‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’: ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಮಾತು

ಕಾಫಿ ನಾಡು ಚಂದು, ಶಿವರಾಜ್​ಕುಮಾರ್​

ಡಿಫರೆಂಟ್​ ರೀಲ್ಸ್​ ಮೂಲಕ ಸೆನ್ಸೇಷನ್​ ಸೃಷ್ಟಿ ಮಾಡಿರುವ ಕಾಫಿ ನಾಡು ಚಂದು (Coffee Nadu Chandu) ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ಅನೇಕರ ಜನ್ಮದಿನಕ್ಕೆ ಅವರು ವಿಶ್​ ಮಾಡುವ ಶೈಲಿಯೇ ಟ್ರೆಂಡ್​ ಆಗಿದೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಲಕ್ಷಾಂತರ ಮಂದಿ ಕಾಫಿ ನಾಡು ಚಂದು ಸ್ಟೈಲ್​ ಕಾಪಿ ಮಾಡಿದ್ದಾರೆ. ಇಷ್ಟೆಲ್ಲ ಫೇಮಸ್​ ಆಗಿರುವ ಅವರಿಗೆ ಒಂದು ದೊಡ್ಡ ಆಸೆ ಇತ್ತು. ಶಿವರಾಜ್​ಕುಮಾರ್ (Shivarajkumar)​ ಅವರನ್ನು ಭೇಟಿ ಮಾಡಬೇಕು ಎಂದು ಚಂದು ಹಲವು ದಿನಗಳಿಂದ ಹಂಬಲಿಸುತ್ತಿದ್ದರು. ಈಗ ಆ ಕಾಲ ಕೂಡಿಬಂದಿದೆ. ಜೀ ಕನ್ನಡದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ (Dance Karnataka Dance) ವೇದಿಕೆ ಮೇಲೆ ಚಂದು ಅವರನ್ನು ಶಿವಣ್ಣ ಭೇಟಿ ಆಗಿದ್ದಾರೆ. ಅಷ್ಟೇ ಅಲ್ಲದೇ, ‘ಇಂಥ ಅಭಿಯಾನಿಯನ್ನು ಪಡೆಯೋಕೆ ಬಹಳ ಪುಣ್ಯ ಮಾಡಿರಬೇಕು’ ಎಂದು ‘ಹ್ಯಾಟ್ರಿಕ್​ ಹೀರೋ’ ಹೇಳಿದ್ದಾರೆ.

ಕಾಫಿ ನಾಡು ಚಂದು ನೀಡಿದ ಸಡನ್​ ಎಂಟ್ರಿ ನೋಡಿ ಕಾರ್ಯಕ್ರಮದ ಜಡ್ಜ್​ ಆದ ರಕ್ಷಿತಾ ಪ್ರೇಮ್​ ಅವರಿಗೆ ಅಚ್ಚರಿ ಆಗಿದೆ. ಇದೇ ಭಾನುವಾರ ಸಂಜೆ 7 ಗಂಟೆಗೆ ಈ ಎಪಿಸೋಡ್​ ಪ್ರಸಾರ ಆಗಲಿದೆ. ಅದರ ಪ್ರೋಮೋವನ್ನು ಕಾಫಿ ನಾಡು ಚಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಚಂದು ಬಗ್ಗೆ ಶಿವಣ್ಣ ಮನಸಾರೆ ಮಾತನಾಡಿದ್ದಾರೆ. ಅಲ್ಲದೇ ಅವರನ್ನು ತಬ್ಬಿಕೊಂಡು ಆತ್ಮೀಯತೆ ತೋರಿದ್ದಾರೆ. ನೆಚ್ಚಿನ ನಟನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಚಂದು ಖುಷಿಪಟ್ಟಿದ್ದಾರೆ.

ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂದು ಚಂದು ಅವರು ಎಲ್ಲಿಲ್ಲದ ಸರ್ಕಸ್​ ಮಾಡಿದ್ದರು. ಅನೇಕ ಮಕ್ಕಳಿಂದ ಆ ಬಗ್ಗೆ ಸಾಂಗ್​ ಮಾಡಿಸಿ ಪೋಸ್ಟ್​ ಮಾಡಿದ್ದರು. ಒಂದು ರೀಲ್ಸ್​ ಮೂಲಕ ನಿರೂಪಕಿ ಅನುಶ್ರೀ ಬಳಿಯೂ ರಿಕ್ವೆಸ್ಟ್​ ಮಾಡಿಕೊಂಡಿದ್ದರು. ಕಡೆಗೂ ಅವರ ಆಸೆ ಈಡೇರಿದೆ. ‘ಚಂದು ಅವರ ತಪ್ಪಸ್ಸಿಗೆ ವರ ಸಿಕ್ಕಿತು’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ‘ಜೀ ಕನ್ನಡದ ವೇದಿಕೆವರೆಗೆ ಬಂದಾಯಿತು. ಇನ್ನೇನಿದ್ದರೂ ಸಿನಿಮಾದಲ್ಲಿ ನಟಿಸೋದು ಮಾತ್ರ ಬಾಕಿ’ ಎಂದು ಚಂದು ಫಾಲೋವರ್ಸ್ ಅಭಿಪ್ರಾಯಪಟ್ಟಿದ್ದಾರೆ.

ದಿನದಿಂದ ದಿನಕ್ಕೆ ಕಾಫಿ ನಾಡು ಚಂದು ಅವರನ್ನು ಫಾಲೋ ಮಾಡುವವರ​ ಸಂಖ್ಯೆ ಹೆಚ್ಚುತ್ತಿದೆ. ಆರಂಭದಲ್ಲಿ ಅವರನ್ನು ಕೆಲವೇ ಕೆಲವು ಮಂದಿ ಫಾಲೋ ಮಾಡುತ್ತಿದ್ದರು. ಈಗ ಬರೋಬ್ಬರಿ 3.80 ಲಕ್ಷ ಫಾಲೋವರ್ಸ್​ ಇದ್ದಾರೆ. ಚಂದು ಮಾಡುವ ಎಲ್ಲ ವಿಡಿಯೋಗಳೂ ವೈರಲ್​ ಆಗುತ್ತಿವೆ.

TV9 Kannada


Leave a Reply

Your email address will not be published.