ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಸಾಲುಸಾಲಾಗಿ ಜಾರಿ ಮಾಡಲಾದ ಲಾಕ್​ಡೌನ್​ನಿಂದಾಗಿ ಸಿನಿಮಾ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರು ಕೆಲಸವಿಲ್ಲದೇ ಪರಿತಪಿಸುವಂತಾಗಿದೆ. ಈ ಹಿನ್ನೆಲೆ ರಾಕಿಂಗ್ ಸ್ಟಾರ್ ಯಶ್ ಇಂದು ಸಿನಿ ಕಾರ್ಮಿಕರಿಗಾಗಿ 1.5 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಚಿತ್ರ ಕಾರ್ಮಿಕರಿಗೆ ₹1.5 ಕೋಟಿಗೂ ಅಧಿಕ ನೆರವು; ಸಲಾಂ ರಾಕಿ ಭಾಯ್ ಎಂದ ಸಿನಿ ಪ್ರಿಯರು

ಯಶ್ ಅವರ ಕಾರ್ಯಕ್ಕೆ ನಟ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ.. ಇದೊಂದು ಉತ್ತಮ ಕಾರ್ಯ.. ಧನ್ಯವಾದಗಳು ಯಶ್.. ಇಂಥ ಮತ್ತಷ್ಟು ಮಹಾತ್ಕಾರ್ಯಗಳು ನಿಮ್ಮಿಂದ ನಡೆಸಲು ಆ ಭಗವಂತ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

The post ಇಂಥ ಮತ್ತಷ್ಟು ಮಹಾತ್ಕಾರ್ಯಗಳು ನಿಮ್ಮಿಂದ ನಡೆಯಲಿ: ಯಶ್​ಗೆ ಥ್ಯಾಂಕ್ಸ್ ಹೇಳಿದ ರಿಯಲ್​ ಸ್ಟಾರ್ appeared first on News First Kannada.

Source: newsfirstlive.com

Source link