ಚೆನ್ನೈ: ಅಣ್ಣಾಮಲೈ ತಮಿಳುನಾಡಿನ ಅರವಕುರುಚಿಯಿಂದ ಬೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿರುವ ಕುರಿತಾಗಿ ಟ್ವೀಟ್ ಮಾಡಿ  ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

ಸೋಲುಗಳು ಜೀವನದ ಒಂದು ಭಾಗವಾಗಿದೆ. ಇಂಥಹ ಸೋಲುಗಳನ್ನು ಜೀವನದಲ್ಲಿ ನಾನು ಬಹಳ ನೋಡಿದ್ದೇನೆ. ನಾನು ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಿಲ್ಲ. ಅರವಕುರುಚಿ ಕ್ಚೇತ್ರದ ಮತದಾರರಿಗೆ ಧನ್ಯವಾದಗಳು. 68 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳೆಂದು ಅರವಕುರುಚಿ ಅಭ್ಯರ್ಥಿ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ ಎಂದು ಹೇಳಿದ್ದ ಅಣ್ಣಾಮಲೈಗೆ ಮತದಾರರು ಕೈ ಹಿಡಿಯಲಿಲ್ಲ. ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸಿಗಂ ಎಂದೇ ಖ್ಯಾತಿ ಪಡೆದಿದ್ದ ಅಣ್ಣಾಮಲೈ ಐಪಿಎಸ್ ತೊರೆದು ರಾಜಕೀಯಕ್ಕೆ ಬಂದರು. ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೀಗ ಸೋಲನ್ನು ಕಂಡಿದ್ದಾರೆ. ಸೋತಿರುವ ಬೇಸರವನ್ನು ಟ್ವೀಟ್ ಮಾಡುವ ಮೂಲಕವಾಗಿ ಹೊರ ಹಾಕಿದ್ದಾರೆ.

The post ಇಂಥ ಸೋಲನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಅಣ್ಣಾಮಲೈ appeared first on Public TV.

Source: publictv.in

Source link