ಇಂದಿನಿಂದ ಆರಂಭವಾಗುವ 2ನೇ ಟೆಸ್ಟ್​ಗೆ ವರುಣನ ಆತಂಕ..!


ಇಂದಿನಿಂದ ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್ ಆರಂಭವಾಗಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಪಂದ್ಯ ಶುರುವಾಗಲಿದ್ದು, ಈಗಾಗಲೇ 2 ಟೆಸ್ಟ್ ಪಂದ್ಯಗಳ ಪೈಕಿ ಒಂದು ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಆದ್ರೆ ಪಂದ್ಯದ ಆರಂಭದ ದಿನಕ್ಕೆ ಮಳೆರಾಯನ ಕಾಟ ಇರಲಿದೆ. ಕಳೆದ 2 ದಿನಗಳಿಂದ ಮುಂಬೈನಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಇಂದು ಕೂಡ ಮಳೆ ಬರುವ ಸಾಧ್ಯತೆ ಇದೆ.

ಕಿವೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಕಮ್​​ಬ್ಯಾಕ್ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಕೊಹ್ಲಿ 2ನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗ್ತಿದ್ದಾರೆ. ಆದ್ರೆ, ಕೊಹ್ಲಿ ಎಂಟ್ರಿಯಿಂದ ತಂಡದಲ್ಲಿ ಓರ್ವ ಆಟಗಾರನಿಗೆ ಕೊಕ್​ ಬೀಳಲಿದೆ. ಮಯಾಂಕ್ ಅಗರ್​ವಾಲ್​ ಅಥವಾ ಶುಭ್ಮನ್​ ಗಿಲ್​​ ಇವರಲ್ಲಿ ಓರ್ವನಿಗೆ ಕೊಕ್ ಕೊಡುವ ಸಾಧ್ಯತೆ ಇದೆ.

News First Live Kannada


Leave a Reply

Your email address will not be published. Required fields are marked *