ಚಿತ್ರೋದ್ಯಮದ ಸದಸ್ಯರಿಗೆ ಉಚಿತ ವ್ಯಾಕ್ಸಿನೇಷನ್​ ನೀಡಬೇಕು ಅಂತ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಅದರಂತೆ ಇಂದಿನಿಂದ ಎರಡು ದಿನಗಳ ಕಾಲ ಸಿನಿಮಾ ಕಲಾವಿದರಿಗೆ ಉಚಿತ ವ್ಯಾಕ್ಸಿನೇಷನ್​​ ನೀಡಲು ಸರ್ಕಾರ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ಹಿರಿಯ ನಟ ದೊಡ್ಡಣ್ಣ ಹಾಗೂ ನಟಿ-ನಿರ್ದೇಶಕಿ ರೂಪ ಐಯ್ಯರ್ ನೇತೃತ್ವದಲ್ಲಿ ಈ ವ್ಯಾಕ್ಸಿನ್ ಶಿಬಿರ ನಡೆಯುತ್ತಿದ್ದು,18 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲಾ ಕಲಾವಿದರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುವುದು. ಬೆಂಗಳೂರಿನ ಕಲಾವಿದರ ಸಂಘದಲ್ಲಿ ಈ ಶಿಬಿರ ಆಯೋಜಿಸಲಾಗಿದೆ.

ಅಂದ್ಹಾಗೇ ವ್ಯಾಕ್ಸಿನೇಷನ್​ ಪಡೆಯಲು ಕಲಾವಿದರು ಎರಡು ನಿಯಮಗಳನ್ನ ಗಣನೆಯಲ್ಲಿಟ್ಟುಕೊಳ್ಳಬೇಕು ಅಂತ ತಿಳಿಸಲಾಗಿದೆ.

  1. ವ್ಯಾಕ್ಸಿನ್ ಪಡೆಯಲು ಕಲಾವಿದರು ಕಲಾವಿದರ ಸಂಘದ ಸದಸ್ಯರಾಗಿರಬೇಕು
  2. ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು

ಎರಡು ದಿನಗಳಲ್ಲಿ ಒಟ್ಟು 500 ಕಲಾವಿದರಿಗೆ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದ್ದು, ಇಂದು 250 ಕಲಾವಿದರಿಗೆ ವ್ಯಾಕ್ಸಿನ್​ ನೀಡಲಾಗುವುದು. ಉಳಿದ 250 ಸದಸ್ಯರಿಗೆ ನಾಳೆ ವ್ಯಾಕ್ಸಿನೇಷನ್​ ಪ್ರೋಸೆಸ್ ನಡೆಯಲಿದೆ. ಸಿನಿಮಾ ಕಲಾವಿದರಿಗೆ ಮಾತ್ರವಲ್ಲದೇ, ಅವರ ಕುಟುಂಬಕ್ಕೂ ಇಲ್ಲಿ ಉಚಿತ ವ್ಯಾಕ್ಸಿನೇಷನ್​ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗ್ತಿದೆ.

The post ಇಂದಿನಿಂದ ಎರಡು ದಿನ ಸಿನಿಮಾ ಕಲಾವಿದರಿಗೆ ಉಚಿತ ವ್ಯಾಕ್ಸಿನೇಷನ್‌ appeared first on News First Kannada.

Source: newsfirstlive.com

Source link