ಛತ್ತೀಸ್​​ಗಡ: ಹರಿಯಾಣ ರಾಜ್ಯ ಸರ್ಕಾರ ಇಂದಿನಿಂದ ಕಂಪ್ಲೀಟ್​​ ಲಾಕ್​​ಡೌನ್​​ ಜಾರಿ ಮಾಡಿದೆ. ಮುಂದಿನ ಏಳು ದಿನಗಳ ಕಾಲ ರಾಜ್ಯದಾದ್ಯಂತ ಲಾಕ್​​ಡೌನ್​​ ಜಾರಿಯಲ್ಲಿ ಇರಲಿದೆ ಅಂತ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಕಳೆದ ಶುಕ್ರವಾರ ಹರಿಯಾಣ ಸರ್ಕಾರ ತನ್ನ 9 ಜಿಲ್ಲೆಗಳಲ್ಲಿ ವೀಕ್​​ಎಂಡ್​​​ ಲಾಕ್​​ಡೌನ್​​ ಜಾರಿ ಮಾಡಿತ್ತು. ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ವೀಕ್​​ಎಂಡ್​ ಲಾಕ್​​ಡೌನ್ ಜಾರಿಯಲ್ಲಿತ್ತು. ಇದರ ನಡುವೆ ಆಕ್ಸಿಜನ್​ ಹಾಗೂ ವೈದ್ಯಕೀಯ ಸೌಲಭ್ಯಗಳಲ್ಲಿ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಸಿಎಂ ಮೋಹನ್​​ಲಾಲ್​​ ಖಟ್ಟರ್​, ರಾಜ್ಯದಲ್ಲಿ ಯಾರೇ ಆಕ್ಸಿಜನ್​, ಆಂಟಿವೈರಲ್ ಇಂಜೆಕ್ಷನ್, ವೈದ್ಯಕೀಯ ಉಪಕರಣಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನಿನ್ನೆ ಹರಿಯಾಣ ಆರೋಗ್ಯ ಇಲಾಖೆ ನೀಡಿದ ಮಾಹಿತಿಯ ಅನ್ವಯ, 13,588 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು,125 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರು.

The post ಇಂದಿನಿಂದ ಒಂದು ವಾರ ಹರಿಯಾಣದಲ್ಲಿ ಕಂಪ್ಲೀಟ್​​ ಲಾಕ್​ಡೌನ್ appeared first on News First Kannada.

Source: newsfirstlive.com

Source link