ನವ ದೆಹಲಿ : ಒನ್‌ ಪ್ಲಸ್ 9 ಮತ್ತು ಒನ್‌ ಪ್ಲಸ್ 9 ಆರ್ ಇಂದು ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಮ್ ಮತ್ತು ರೆಡ್ ಕೇಬಲ್ ಕ್ಲಬ್ ನಲ್ಲಿ ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ)ಯಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಒನ್‌ ಪ್ಲಸ್ 9 ಮಿಡ್ – ಟಯರ್ ಮಾಡೆಲ್ ಆಗಿದ್ದು, ಒನ್‌ ಪ್ಲಸ್ 9 ಆರ್ ಸೀರೀಸ್ ನ ಗ್ರಾಹಕ ಸ್ನೇಹಿ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ಪ್ರೀಮಿಯಂ ಒನ್‌ ಪ್ಲಸ್ 9 ಪ್ರೊ ಕೂಡ ಸೇರಿದೆ. ಒನ್‌ ಪ್ಲಸ್ 9 ಮತ್ತು ಒನ್‌ ಪ್ಲಸ್ 9 ಆರ್ ಎರಡೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 800 ಸರಣಿ SoC ಗಳು, ಹೆಚ್ಚಿನ ರಿಫ್ರೆಶ್ ರೇಟ್ ಪ್ರದರ್ಶನಗಳು ಮತ್ತು ವೇಗದ ಚಾರ್ಜಿಂಗ್‌ನಂತಹ ಆಕರ್ಷಕ ವಿಶೇಷತೆಗಳನ್ನು ಒಳಗೊಂಡಿದೆ

ಒನ್‌ ಪ್ಲಸ್ 9, ಒನ್‌ ಪ್ಲಸ್ 9 ಆರ್ : ಭಾರತದಲ್ಲಿ ಬೆಲೆ ಎಷ್ಟು ?

ಒನ್‌ ಪ್ಲಸ್ 9 8ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ನ್ನು ಹೊಂದಿದ್ದು, ಇದರ ಬೆಲೆ 49,999 ರೂ ಆಗಿದೆ. ಮತ್ತು 12ಜಿಬಿ RAM + 256GB ಸ್ಟೋರೇಜ್ ಕೆಪಾಸಿಟಿ ಹೊಂದಿರುವ ಮಾದರಿಗೆ ರೂ. 54,999 ರೂ. ಆಗಿದೆ. ಫೋನ್ ಗಳು ಆರ್ಕ್ಟಿಕ್ ಸ್ಕೈ, ಆಸ್ಟ್ರಲ್ ಬ್ಲ್ಯಾಕ್ ಮತ್ತು ವಿಂಟರ್ ಮಿಸ್ಟ್ ನಲ್ಲಿ ಬಣ್ಣಗಳಲ್ಲಿ ಲಭ್ಯವಿದೆ.

ಒನ್‌ ಪ್ಲಸ್ 9 ಆರ್ ಅದೇ ಎರಡು ಕಾನ್ಫಿಗರೇಶನ್‌ ಗಳಲ್ಲಿ  8ಜಿಬಿ ರಾಮ್ ಮಾದರಿಯೊಂದಿಗೆ  39,999 ರೂ. ಮತ್ತು 12 ಜಿಬಿ ರಾಮ್ ಮಾದರಿಯ ಬೆಲೆ 43,999 ರೂ. ಆಗಿದೆ ಇದನ್ನು ಕಾರ್ಬನ್ ಬ್ಲ್ಯಾಕ್ ಮತ್ತು ಲೇಕ್ ಬ್ಲೂ ಬಣ್ಣಗಳಲ್ಲಿ ನೀಡಲಾಗುತ್ತದೆ.

ಒನ್‌ ಪ್ಲಸ್ 9 ಮತ್ತು ಒನ್‌ ಪ್ಲಸ್ 9 ಆರ್ ಎರಡೂ ಅಮೆಜಾನ್ ಪ್ರೈಮ್ ಇಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಅಮೆಜಾನ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಅಂತೆಯೇ, ರೆಡ್ ಕೇಬಲ್ ಕ್ಲಬ್ ಸದಸ್ಯರು ಎರಡು ಫೋನ್‌ಗಳನ್ನು ಒನ್‌ಪ್ಲಸ್ ವೆಬ್‌ಸೈಟ್ ಅಥವಾ ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್‌ ನಿಂದ ಮಧ್ಯಾಹ್ನ 12 ರಿಂದ ಖರೀದಿಸಲು ಸಾಧ್ಯವಿದೆ.

ಒನ್‌ ಪ್ಲಸ್ 9 ವಿಶೇಷತೆಗಳೇನು..?

ಒನ್‌ ಪ್ಲಸ್ 9 ಇದು 6.55-ಇಂಚಿನ ಫುಲ್ ಎಚ್‌ ಡಿ + (1,080×2,400 ಪಿಕ್ಸೆಲ್‌ಗಳು) 120Hz ರಿಫ್ರೆಶ್ ರೇಟ್ ಮತ್ತು 20: 9 ಆಕಾರ ಅನುಪಾತದೊಂದಿಗೆ ಪ್ಲ್ಯೂಯಿಡ್ ಡಿಸ್ ಪ್ಲೇ  AMOLED ಹೊಂದಿದೆ. ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ನಿಂದ 12GB ವರೆಗೆ LPDDR5 RAM ಮತ್ತು 256GB ವರೆಗೆ UFS 3.1 ಸ್ಟೋರೇಜ್ ನ್ನು ಹೊಂದಿದೆ.

ಫೋಟೋಗಳು ಮತ್ತು ವೀಡಿಯೊಗಳಿಗಾಗಿ, ಒನ್‌ ಪ್ಲಸ್ 9 ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ, ಇದರಲ್ಲಿ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 689 ಪ್ರೈಮರಿ ಸೆನ್ಸಾರ್ f / 1.8 ಲೆನ್ಸ್, 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಸೆನ್ಸಾರ್ ಅಲ್ಟ್ರಾ ವೈಡ್ ಆಂಗಲ್ f / 2.2 ಫ್ರೀಫಾರ್ಮ್ ಲೆನ್ಸ್, ಮತ್ತು 2 ಮೆಗಾಪಿಕ್ಸೆಲ್ ಮೋನೋಕ್ರೋಮ್ ಸೆನ್ಸಾರ್. ಮುಂಭಾಗದಲ್ಲಿ, 16 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 471 ಸೆಲ್ಫಿ ಕ್ಯಾಮೆರಾ ‍ f/ 2.4 ಅಪರ್ಚರ್ ಹೊಂದಿದೆ.

ಒನ್‌ ಪ್ಲಸ್ 9 ಆರ್ ವಿಶೇಷತೆಗಳೇನು..?

ಒನ್‌ ಪ್ಲಸ್ 9 ಆರ್ ಒನ್‌ ಪ್ಲಸ್ 9 ರಂತೆಯೇ ಡಿಸ್ಪ್ಲೇ ಯನ್ನು ಹೊಂದಿದೆ. ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 SoC ನಿಂದ 12GB ವರೆಗೆ RAM ಮತ್ತು 256GB ವರೆಗೆ ಸ್ಟೋರೇಜ್ ನನ್ನು ಹೊಂದಿದೆ., ಒನ್‌ ಪ್ಲಸ್ 9 ಆರ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಪ್ರೈಮರಿ ಸೆನ್ಸಾರ್ f / 1.7 ಲೆನ್ಸ್, 16 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಶೂಟರ್, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಮೋನೋಕ್ರೋಮ್ ಸೆನ್ಸಾರ್. ಮುಂಭಾಗದಲ್ಲಿ ಒನ್‌ ಪ್ಲಸ್ 9 ರಂತೆಯೇ 16 ಮೆಗಾಪಿಕ್ಸೆಲ್ ಶೂಟರ್ ನ್ನು ಒಳಗೊಂಡಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More