ಸತತ ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರವನ್ನ ಕಿತ್ತೊಗೆದಿರುವ ಡಿಎಂಕೆ, ಇವತ್ತು ಮತ್ತೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ. ನೂತನ ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟ್ಯಾಲಿನ್ ಇಂದು ಬೆಳಿಗ್ಗೆ 9 ಗಂಟೆಗೆ ರಾಜ್ಯಭವನದಲ್ಲಿ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ.

ಸ್ಟಾಲಿನ್ ಅವರೊಂದಿಗೆ 33 ನೂತನ ಸಚಿವರು ಕೂಡ ಪ್ರಮಾಣವಚನ ಸ್ವೀಕರ ಮಾಡಿಲಿದ್ದಾರೆ. ನಿನ್ನೆ ಸಂಜೆ ಸಚಿವರ ಪಟ್ಟಿಯನ್ನು ಸ್ಟಾಲಿನ್ ಬಿಡುಗಡೆಗೊಳಿಸಿದ್ದರು. 33 ಶಾಸಕರಲ್ಲಿ 12 ಮಂದಿ ಮೊದಲ ಬಾರಿಗೆ ಸಚಿವರಾಗುತ್ತಿದ್ದು, ಪಟ್ಟಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಸಹಿ ಹಾಕಿದ್ದಾರೆ. ಇನ್ನೂ ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಎನ್‌. ರಂಗಸ್ವಾಮಿ ಕೂಡ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

The post ಇಂದಿನಿಂದ ತಮಿಳುನಾಡಿನಲ್ಲಿ ಸ್ಟಾಲಿನ್​ ಪರ್ವ- 34 ಸಚಿವರ ಪಟ್ಟಿ ಬಿಡುಗಡೆ appeared first on News First Kannada.

Source: newsfirstlive.com

Source link