ನವದೆಹಲಿ: ದೇಶದಾದ್ಯಂತ ಇಂದಿನಿಂದ ಯೂನಿವರ್ಸಲ್ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ.. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಘೋಷಣೆ ಮಾಡಿದಂತೆ ಇನ್ನು ಮುಂದೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನ್ ನೀಡಲಾಗುತ್ತದೆ.

ಇಂದು 7 ನೇ ಅಂತಾರಾಷ್ಟ್ರೀಯ ಯೋಗ ದಿನವೂ ಆಗಿದ್ದೂ ಇಂದಿನಿಂದಲೇ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ. ಇನ್ನು ವ್ಯಾಕ್ಸಿನ್ ಪಡೆದುಕೊಳ್ಳಲು ಜನರಿಗೆ ತೊಂದರೆಯಾಗದಿರಲೆಂದು ರೆಜಿಸ್ಟ್ರೇಷನ್​ ನಿಯಮದಲ್ಲೂ ಸಂಪೂರ್ಣ ಸಡಿಲಿಕೆ ಮಾಡಲಾಗಿದೆ. ವಾಕ್​ ಇನ್ ವ್ಯಾಕ್ಸಿನೇಷನ್​ಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು ವ್ಯಾಕ್ಸಿನ್ ಸೆಂಟರ್​ಗಳಲ್ಲೇ ರೆಜಿಸ್ಟ್ರೇಷನ್​ ಮಾಡಿಸಿ ವ್ಯಾಕ್ಸಿನ್ ಪಡೆಯಬಹುದಾಗಿದೆ.

ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್​ಗೆ ಕೇವಲ 150 ರೂ ಮಾತ್ರ ಸರ್ವೀಸ್ ಚಾರ್ಜ್ ವಿಧಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನೇಷನ್​ ಇರುವುದಿಲ್ಲ. ಫಲಾನುಭವಿಗಳು ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಪಡೆಯಲು ಅವಕಾಶವಿದೆ. ದೇಶದಲ್ಲಿ ಇಲ್ಲಿಯವರೆಗೆ ಸುಮಾರು 28 ಕೋಟಿ ಡೋಸ್​ನಷ್ಟು ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ.

The post ಇಂದಿನಿಂದ ದೇಶದಾದ್ಯಂತ ಯೂನಿವರ್ಸಲ್ ವ್ಯಾಕ್ಸಿನೇಷನ್: 18 ವರ್ಷ ಮೇಲ್ಪಟ್ಟವರಿಗೆ ಫ್ರೀ ಲಸಿಕೆ appeared first on News First Kannada.

Source: newsfirstlive.com

Source link