ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಎರಡನೇ ಹಂತದ ಲಾಕ್​ಡೌನ್ ಸಡಿಲಿಕೆ ಜಾರಿಯಾಗ್ತಿದೆ. ಶೇಕಡ 5ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆ.

ಇಂದಿನಿಂದ ಕೆಎಸ್​​ಆರ್​ಟಿಸಿ, ಬಿಎಂಟಿಸಿ ಬಸ್​ಗಳ ಸಂಚಾರ ಪ್ರಾರಂಭವಾಗಿದೆ. ಎರಡನೇ ಹಂತದ ಅನ್ಲಾಕ್​​ನಲ್ಲಿ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಇನ್ನು ಮೈಸೂರು ಹಾಗೂ ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಜೊತೆಗೆ ಇಂದಿನಿಂದ ಮೆಟ್ರೋ ಸಂಚಾರ ಸಹ ಪುನರಾರಂಭವಾಗಿದೆ. ಮೆಟ್ರೋ ಕಾರ್ಡ್ ಇದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

  • ಉಳಿದ ಜಿಲ್ಲೆಗಳಲ್ಲಿ ಸದ್ಯ ಜಾರಿಯಲ್ಲಿರೋ ನಿಯಮಗಳು ಕಂಟಿನ್ಯೂ ಆಗ್ತಿದೆ.
  • ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನು ವಿಸ್ತರಿಸಲಾಗಿದೆ.
  • ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
  • ಎ.ಸಿ ಇಲ್ಲದೆ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ನಲ್ಲಿ ಕುಳಿತು ತಿನ್ನಲು ಅವಕಾಶ ಕೊಡಲಾಗಿದೆ.
  • ಶೇಕಡ 50ರಷ್ಟು ಸೀಟಿಂಗ್​ನೊಂದಿಗೆ ಕೆಎಸ್​​ಆರ್​ಟಿಸಿ, ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

The post ಇಂದಿನಿಂದ ರಾಜ್ಯದಲ್ಲಿ 2ನೇ ಹಂತದ ಅನ್ಲಾಕ್; BMTC- ಮೆಟ್ರೋ ಸಂಚಾರ ಪುನರಾರಂಭ appeared first on News First Kannada.

Source: newsfirstlive.com

Source link