ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್​​ಲಾಕ್.. ದೇಗುಲ, ಮಾಲ್​ಗಳು ಓಪನ್

ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್​​ಲಾಕ್.. ದೇಗುಲ, ಮಾಲ್​ಗಳು ಓಪನ್

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 3ನೇ ಹಂತದ ಅನ್​​ಲಾಕ್ ಜಾರಿಯಾಗಿದ್ದು ಈ ಮೂಲಕ ರಾಜ್ಯ ಸಂಪೂರ್ಣವಾಗಿ ಓಪನ್ ಆಗಿದೆ. ಮೂರನೇ ಹಂತದ ಅನ್​​ಲಾಕ್​ನಲ್ಲಿ ಬಹುತೇಕ ಎಲ್ಲ ವಲಯಗಳಿಗೂ ಸರ್ಕಾರ ರಿಲೀಫ್ ನೀಡಿದೆ.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಇವತ್ತಿನಿಂದ ಶೇಕಡಾ 100ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಲ್ಲದೇ ಇಂದಿನಿಂದ ಮಾಲ್​​ಗಳು ಸಹ ಒಂದಷ್ಟು ಷರತ್ತುಗಳೊಂದಿಗೆ ಓಪನ್ ಆಗಲಿವೆ. ಇನ್ನು ಅಂತ್ಯಸಂಸ್ಕಾರಕ್ಕೆ 20 ಮತ್ತು ಮದುವೆ ಸೇರಿ ಇತರ ಕೌಟುಂಬಿಕ ಕಾರ್ಯಕ್ರಮಕ್ಕೆ 100 ಮಂದಿ ಸೇರಲು ಅನುವು ಮಾಡಿಕೊಡಲಾಗಿದೆ.  ಕ್ರೀಡಾ ಸಂಕೀರ್ಣ, ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ. ಜೊತೆಗೆ ವಾರಾಂತ್ಯದ ಕರ್ಫ್ಯೂ ರದ್ದುಪಡಿಸಲಾಗಿದೆ.

ರಾಜಧಾನಿಯಲ್ಲಿ ಇಂದಿನಿಂದ ಪ್ರತಿದಿನ 4 ಸಾವಿರದ 500 ಬಿಎಂಟಿಸಿ ಬಸ್ ರಸ್ತೆಗಿಳಿಯಲಿವೆ. QR Code ಮೂಲಕ ಟಿಕೆಟ್ ಬುಕ್ಕಿಂಗ್​​ಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ 5 ರಿಂದ ರಾತ್ರಿ 9ರವರೆಗೆ ಬಿಎಂಟಿಸಿ ಬಸ್ ಕಾರ್ಯಾಚರಣೆ ನಡೆಸಲಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಾರಿಗೆ ಬಸ್ ಸಂಚಾರ ಹೆಚ್ಚಳ ಮಾಡುವುದಾಗಿ ಬಿಎಂಟಿಸಿ ತಿಳಿಸಿದ್ದು, ಎಲ್ಲಾ ಬಿಎಂಟಿಸಿ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಕೆಎಸ್ಆರ್​​ಟಿಸಿ ಸಹ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ.

ಮದ್ಯ ಪ್ರಿಯರಿಗೆ ಬಾರ್​​ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ. ಈ ಮೊದಲು, ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿತ್ತು. ಈಗ, ಬಾರ್​​ನಲ್ಲೇ ಕುಳಿತು ಕುಡಿಯಲು ಅವಕಾಶ ಕೊಡಲಾಗಿದೆ. ಆದರೆ, ಬಾರ್ ಸಪ್ಲೈಯರ್ಸ್ ಅಥವಾ ರೆಸ್ಟೋರೆಂಟ್ ಸಪ್ಲೈಯರ್ಸ್ ಹಾಗೂ ಕೆಲಸಗಾರರು ಲಸಿಕೆ ಹಾಕಿಕೊಂಡಿರುವುದು ಕಡ್ಡಾಯ ಮಾಡಲಾಗಿದೆ.

ಇನ್ನು ಬೆಳಗ್ಗೆ 7 ರಿಂದ ರಾತ್ರಿ 8ರವರೆಗೆ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಗರಿಷ್ಠ ಸಮಯದಲ್ಲಿ 5 ನಿಮಿಷಕ್ಕೊಂದು ರೈಲು, ಇತರೆ ವೇಳೆ 15 ನಿಮಿಷ ಅಂತರದಲ್ಲಿ ಮೆಟ್ರೋ ಸೇವೆ ನೀಡಲಿದೆ.  ಶನಿವಾರ ಮತ್ತು ಭಾನುವಾರ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಮೆಟ್ರೋರೈಲು ಓಡಾಟ ನಡೆಸಲಿದೆ.

The post ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್​​ಲಾಕ್.. ದೇಗುಲ, ಮಾಲ್​ಗಳು ಓಪನ್ appeared first on News First Kannada.

Source: newsfirstlive.com

Source link