ಬೆಂಗಳೂರು: ಇಂದಿನಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್​ಡೌನ್ ಭಾಗಶಃ ಸಡಿಲಿಕೆ ಆಗಿದೆ. ಇನ್ನುಳಿದ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಒಂದು ವಾರ ಲಾಕ್​ಡೌನ್ ಮುಂದುವರಿಯಲಿದೆ.

ಕೊರೊನಾ ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್​ಲಾಕ್​ ಇರಲಿದೆ. ಬೆಂಗಳೂರು ಅನ್​ಲಾಕ್ ಆದ್ರು ಬಿಎಂಟಿಸಿ, ಕೆಎಸ್ಆರ್​​ಟಿಸಿ, ಮೆಟ್ರೋ ಸಂಚಾರ ಇರೋದಿಲ್ಲ. ವಾರಾಂತ್ಯದಲ್ಲಿ ಸಂಪೂರ್ಣ ಕರ್ಫ್ಯೂ ಇರಲಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಕರ್ಫ್ಯೂ ಇರಲಿದೆ.

ಇನ್ನ ಲಾಕ್​ಡೌನ್ ಸಡಿಲಿಕೆ ಹಿನ್ನೆಲೆ, ತಮ್ಮ ಊರುಗಳಿಗೆ ತೆರಳಿದ್ದ ಜನರು ಮತ್ತೆ ಕೆಲಸಕ್ಕಾಗಿ ಬೆಂಗಳೂರಿನತ್ತ ರೈಲುಗಳಲ್ಲಿ ಆಗಮಿಸ್ತಿದ್ದಾರೆ.

The post ಇಂದಿನಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಿಕೆ appeared first on News First Kannada.

Source: newsfirstlive.com

Source link