ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನಿಂದ ಬಾಧಿತರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮೂರನೇ ಹಂತದ ವ್ಯಾಕ್ಸಿನೇಷನ್​ ಮಹಾ ಅಭಿಯಾನವನ್ನ ಮೇ 1 ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಮೇ ತಿಂಗಳಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಛಿಸುವವರು ಇಂದಿನಿಂದ ಕೋವಿನ್ ವೆಬ್​​ಸೈಟ್​​  ಅಥವಾ ಆರೋಗ್ಯ ಸೇತು ಆ್ಯಪ್​​ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳೋದು ಹೇಗೆ?

  • www.cowin.gov.in ವೆಬ್​ಸೈಟ್​​ಗೆ ಭೇಟಿ ನೀಡಿ
  • ರೆಜಿಸ್ಟರ್​ ಯುವರ್​ಸೆಲ್ಫ್​ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಮೊಬೈಲ್​ ನಂಬರ್ ಹಾಕಿ, ನಂತರ ನಿಮ್ಮ ಮೊಬೈಲ್​ಗೆ ಬರುವ ಒಟಿಪಿಯನ್ನ ಸಲ್ಲಿಸಿ(ಮೂರು ನಿಮಿಷಗಳವರೆಗೆ ಮಾತ್ರ ಒಟಿಪಿ ವ್ಯಾಲಿಡ್​ ಇರುತ್ತದೆ)
  • ನಂತರ ನಿಮ್ಮ ಫೋಟೋ ಐಡಿ ಪ್ರೂಫ್, ಐಡಿ ಸಂಖ್ಯೆ,  ಹುಟ್ಟಿದ ವರ್ಷ  ಮುಂತಾದ ಮಾಹಿತಿಯನ್ನ ನೀಡಿ, ನೀವು ವ್ಯಾಕ್ಸಿನ್ ಪಡೆಯುವ ಹತ್ತಿರದ ಸ್ಥಳ ಹಾಗೂ ಸ್ಲಾಟ್​ ಬುಕ್ ಮಾಡಿ ರೆಜಿಸ್ಟರ್ ಮಾಡಿಕೊಳ್ಳಬಹುದು

 

The post ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೋಂದಣಿ ಆರಂಭ appeared first on News First Kannada.

Source: newsfirstlive.com

Source link