ಶಿವಮೊಗ್ಗ: ನಗರದಲ್ಲಿ ಇಂದಿನಿಂದ ನಾಲ್ಕು ದಿನ ಫುಲ್ ಲಾಕ್​​ಡೌನ್ ಜಾರಿಯಾಗಿದೆ. ಕೊರೊನಾ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡುಗಳಲ್ಲಿ ಸಂಪೂರ್ಣ ಲಾಕ್​​ಡೌನ್ ವಿಧಿಸಲಾಗಿದೆ.

ಆಯ್ದ ಕೈಗಾರಿಕೆಯ ಕಾರ್ಮಿಕರಿಗೆ ಮಾತ್ರ ಓಡಾಡಲು ಅವಕಾಶ ಇದ್ದು, ಎಂದಿನಂತೆ ಬೆಳಗ್ಗೆ 6 ರಿಂದ 10ರ ತನಕ ಮನೆ ಸಮೀಪದ ದಿನಸಿ ಅಂಗಡಿಯಲ್ಲಿ ಅಗತ್ಯವಸ್ತುಗಳ ಖರೀದಿಗೆ ಜನತೆಗೆ ಅವಕಾಶ ಕಲ್ಪಿಸಲಾಗಿದೆ.

ಎಪಿಎಂಸಿ, ಸಗಟು ದಿನಸಿ ಸೇರಿದಂತೆ ವಿವಿಧ ವಹಿವಾಟಿಗೆ ನಿರ್ಬಂಧ ಹೇರಲಾಗಿದೆ. ಬಹಳಷ್ಟು ಕಡೆ, ಬ್ಯಾರಿಕೇಡ್ ಅಳವಡಿಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನ ನಿಲ್ಲಿಸಿ ತಪಾಸಣೆ ಕೂಡ ಮಾಡಲಾಗ್ತಿದೆ.

The post ಇಂದಿನಿಂದ 4 ದಿನ ಶಿವಮೊಗ್ಗದ 35 ವಾರ್ಡ್​ಗಳು ಫುಲ್​ ಲಾಕ್​​ಡೌನ್​ appeared first on News First Kannada.

Source: newsfirstlive.com

Source link