ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಇಂದಿನಿಂದ ಐದು ದಿನಗಳ ಕಾಲ 100 ನಾಟ್​​ಔಟ್​ ಪ್ರತಿಭಟನೆ ನಡೆಸಲಿದೆ.

ರಾಜ್ಯಾದ್ಯಂತ 5 ಸಾವಿರ ಪೆಟ್ರೋಲ್​ ಬಂಕ್​ಗಳ ಎದುರು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಹಿನ್ನೆಲೆ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ಶಾಸಕರು, ಸಂಸದರು, ಪದಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು.

ಈ ವೇಳೆ ತಮ್ಮ ಹೋರಾಟದ ರೂಪುರೇಷಗಳ ಬಗ್ಗೆ ನಾಯಕರು ವಿವರಿಸಿದ್ದಾರೆ. ದೇಶಾದ್ಯಂತ ಪೆಟ್ರೋಲ್ ಪ್ರತಿ ಲೀಟರ್​ಗೆ 100 ಗಡಿ ದಾಟಿದೆ. ದಿನೇ ದಿನೇ ಪೆಟ್ರೋಲ್ ಏರುತ್ತಿರೋದನ್ನ ಖಂಡಿಸಿ ಬೀದಿಗೆ ಇಳಿಯಲು ಕಾಂಗ್ರೆಸ್​ ನಿರ್ಧಾರ ಮಾಡಿದೆ.

The post ಇಂದಿನಿಂದ 5 ದಿನ ಕಾಂಗ್ರೆಸ್​ನಿಂದ ‘100 ನಾಟ್​​ಔಟ್’ ಪ್ರೊಟೆಸ್ಟ್ appeared first on News First Kannada.

Source: newsfirstlive.com

Source link