ಬೆಂಗಳೂರು: ಇಂದಿರಾ ಕ್ಯಾಂಟೀನ್​​ನಲ್ಲಿ ಊಟ ಮಾಡೋಕೆ ಯಾವುದೇ ದಾಖಲೆ ತೋರಿಸಬೇಕಿಲ್ಲ ಅಂತಾ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್​ನಲ್ಲಿ ಬಡ ಜನರು, ವಲಸಿಗರು ಮತ್ತು ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲು ಯಾವುದೇ ಗುರುತಿನ ಪುರಾವೆ/ ಮೊಬೈಲ್ ಸಂಖ್ಯೆಯ ಅಗತ್ಯವಿಲ್ಲ. ಇಂದು ಬೆಳಗ್ಗೆ ಇಂದಿರಾ ಕ್ಯಾಂಟೀನ್​ನ ಅಡುಗೆ ಮನೆಗೆ ನಾನು ಭೇಟಿ ನೀಡಿದಾಗ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಅಂತಾ ಗೌರವ್ ಗುಪ್ತಾ ತಿಳಿಸಿದ್ದಾರೆ.

ನಿನ್ನೆ ಬಿಬಿಎಂಪಿ ಆದೇಶದಲ್ಲಿ ದಾಖಲೆ ತೋರಿಸಿ ಊಟ ಮಾಡುವಂತೆ ಆದೇಶ ನೀಡಿತ್ತು. ಇದೀಗ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಊಟ ಮಾಡಲು ಯಾವುದೇ ದಾಖಲೆಗಳನ್ನ ತೋರಿಸುವ ಅಗತ್ಯ ಇಲ್ಲ ಅಂತಾ ಹೇಳಿದೆ.

The post ಇಂದಿರಾ ಕ್ಯಾಂಟೀನ್​​ನಲ್ಲಿ ಊಟ ಮಾಡಲು ಗುರುತಿನ ಪುರಾವೆ ಬೇಕಿಲ್ಲ appeared first on News First Kannada.

Source: newsfirstlive.com

Source link