ಬೆಂಗಳೂರು: ಕಾರ್ಮಿಕರು, ವಲಸಿಗರು ಹಾಗೂ ನಿರ್ಗತಿಕರಿಗಾಗಿ ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತ ಊಟ ನೀಡುವ ನಿರ್ಧಾರ ಮಾಡಲಾಗಿದ್ದು, ಇಂದಿನಿಂದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಪಹಾರ, ಊಟ ನೀಡಲಾಗುತ್ತಿದೆ. ಹೀಗಾಗಿ ಜನ ಸಾಲುಗಟ್ಟಿ ನಿಂತು ತಿಂಡಿ ಪಡೆದಿದ್ದಾರೆ.

ಕಾರ್ಪೋರೇಷನ್ ಸರ್ಕಲ್ ಮುಂದೆ ನೂರಾರು ಜನ ಕ್ಯೂ ನಿಂತಿದ್ದಾರೆ. ಕಾರ್ಪೊರೇಷನ್ ಸರ್ಕಲ್ ಬಳಿ ಫೋಟಿಂಗ್ ಜನ, ಸುತ್ತ ಸರ್ಕಾರಿ ಕಚೇರಿಗಳು, ವ್ಯಾಪಾರಿಗಳೇ ಹೆಚ್ಚು ಜನ ಊಟಕ್ಕಾಗಿ ಆಗಮಿಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಊಟ ಸಿಗದ್ದಕ್ಕೆ ನಿರ್ಗತಿಕರು, ಬಡವರು ಹಾಗೂ ವಲಸಿಗರಿಗಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ.

ನೂರಾರು ಜನ ಉಚಿತ ಊಟಕ್ಕಾಗಿ ಇಂದಿರಾ ಕ್ಯಾಂಟೀನ್ ಮುಂದೆ ಕ್ಯೂ ನಿಂತಿದ್ದಾರೆ. ಬೆಂಗಳೂರಿನ ಎಲ್ಲ ಇಂದಿರಾ ಕ್ಯಾಂಟೀನ್ ಗಳ ಮುಂದೆ ಜನ ತುಂಬಿದ್ದಾರೆ. ಬೆಳಗ್ಗೆ 7.30ರಿಂದ ಉಚಿತವಾಗಿ ತಿಂಡಿ ನೀಡಲಾಗುತ್ತಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ದಿನಕ್ಕೆ ಮೂರು ಹೊತ್ತು ಆಹಾರ ನೀಡಲು ಸರ್ಕಾರ ಅದೇಶಿಸಿದೆ. ಹೀಗಾಗಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‍ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ತಮ್ಮ ಹೆಸರು, ವಿಳಾಸದ ಮಾಹಿತಿ ನೀಡಿ ಜನ ತಿಂಡಿ ಪಡೆಯುತ್ತಿದ್ದಾರೆ.

The post ಇಂದಿರಾ ಕ್ಯಾಂಟೀನ್ ಮುಂದೆ ಜನವೋ ಜನ- ಊಟಕ್ಕಾಗಿ ಸಾಲು appeared first on Public TV.

Source: publictv.in

Source link