ಇಂದು ಅಫ್ಘಾನ್ ಗೆಲುವಿನ ಮೇಲೆ ನಿಂತಿದೆ ಭಾರತ ತಂಡದ ‘ವಿಶ್ವಕಪ್ ಭವಿಷ್ಯ’..!


ಇಂದಿನ ಆಫ್ಘಾನ್-ನ್ಯೂಜಿಲೆಂಡ್ ಮ್ಯಾಚ್,​ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಇದೊಂದು ಪಂದ್ಯದ ಫಲಿತಾಂಶದ ಮೇಲೆಯೇ, ಟೀಮ್ ಇಂಡಿಯಾದ ಭವಿಷ್ಯ ನಿಂತಿದೆ. ಈ ನಿರ್ಣಾಯಕ ಪಂದ್ಯದ ಮೇಲೆಯೇ ಅಫ್ಘಾನ್ ಆ್ಯಂಡ್ ಕಿವೀಸ್​​​ನ ಸೆಮೀಸ್ ಹಾದಿಯೂ ನಿರ್ಣಯವಾಗಲಿದೆ. ಹಾಗಾದ್ರೆ ಈ ನಿರ್ಣಾಯಕ ಪಂದ್ಯದಲ್ಲೇ ವಿರಾಟ್ ಪಡೆಯ ಭವಿಷ್ಯ ಏನಾಗಬಹುದು?

ನಾವು ನಮ್ಮ ಬ್ಯಾಗ್​ ಪ್ಯಾಕ್ ಮಾಡಿ ಮನೆಗೆ ಹಿಂತಿರುಗುತ್ತೇವೆ.
ಜಡೇಜಾ, ಆಲ್​ರೌಂಡರ್

ಜಡೇಜಾ ಹೇಳಿರುವ ಈ ಮಾತು ಸ್ಕಾಟ್ಲೆಂಡ್​​​ ವಿರುದ್ಧದ ಗೆಲುವಿನ ಬಳಿಕವಾದ್ರೂ, ಟೀಮ್ ಇಂಡಿಯಾಕ್ಕೆ ಸರಿಯಾಗೇ ಅನ್ವಯಿಸುತ್ತೆ. ಯಾಕಂದ್ರೆ ಅಫ್ಘಾನ್ ಹಾಗೂ ನ್ಯೂಜಿಲೆಂಡ್ ಪಂದ್ಯದ ಫಲಿತಾಂಶ ಬಳಿಕ, ಕೊಹ್ಲಿ ಬಾಯ್ಸ್​ ಬ್ಯಾಗ್​ನೊಂದಿಗೆ ತವರಿಗೆ ಹಿಂತಿರುಗಬೇಕಾ ಬೇಡ್ವಾ ಎಂಬ ಪ್ರಶ್ನೆಗಳಿಗೆ, ಉತ್ತರ ಸಿಗಲಿದೆ. ಹೀಗಾಗಿಯೇ ವಿಶ್ವ ಕ್ರಿಕೆಟ್​ ಅಭಿಮಾನಿಗಳ ಚಿತ್ತವೆಲ್ಲಾ, ಈಗ ಅಬುಧಾಬಿಯಲ್ಲಿ ನಡೆಯೋ ಈ ಕ್ರಿಕೆಟ್​ ಸಮರದತ್ತಲೇ ನೆಟ್ಟಿದೆ.

ಅಫ್ಘಾನಿಸ್ತಾನದ ಕೈಯಲ್ಲಿ ಟೀಮ್ ಇಂಡಿಯಾದ ಭವಿಷ್ಯ..!
ಆರಂಭಿಕ ಎರಡು ಪಂದ್ಯಗಳನ್ನ ಸೋತಿದ್ದ ಟೀಮ್ ಇಂಡಿಯಾ, ಈಗ ಬ್ಯಾಕ್ ಟು ಬ್ಯಾಕ್ ಅಫ್ಘಾನ್​​, ಸ್ಕಾಟ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಇದರರೊಂದಿಗೆ ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡಿದೆ. ಆದ್ರೆ ಕೊಹ್ಲಿ ಬಾಯ್ಸ್​ ಸೆಮೀಸ್​ ಪ್ರವೇಶದ ಭವಿಷ್ಯ, ಸಂಪೂರ್ಣ ಅಫ್ಘಾನ್​​​ ಮೇಲೆಯೇ ನಿಂತಿದೆ. ಹೀಗಾಗಿಯೇ ಟೀಮ್ ಇಂಡಿಯಾ, ಇಂದು ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನದ ಗೆಲುವಿಗಾಗಿ ಹಪಪಿಸುತ್ತಿದೆ. ಯಾಕಂದ್ರೆ, ನ್ಯೂಜಿಲೆಂಡ್​ನ ಸೋಲು ಮಾತ್ರವೇ ಟೀಮ್ ಇಂಡಿಯಾದ ಸೆಮೀಸ್​​ ಆಸೆಗೆ ನೀರೆರೆಯಲಿದೆ.

ಇಂದಿನ ಫಲಿತಾಂಶದ ಮೇಲೆಯೇ 3 ತಂಡಗಳ ಭವಿಷ್ಯ..!
ಬರೀ ಟೀಮ್ ಇಂಡಿಯಾದ ಭವಿಷ್ಯ ಮಾತ್ರವೇ ಇಂದಿನ ಪಂದ್ಯದ ಮೇಲೆ ನಿಂತಿಲ್ಲ. ಇಂದು ಸೆಣಸಾಡುತ್ತಿರುವ ಅಫ್ಘಾನಿಸ್ತಾನ, ನ್ಯೂಜಿಲೆಂಡ್ ತಂಡಗಳ ಸೆಮೀಸ್ ಹಾದಿಯೂ, ಇಂದಿನ ಫಲಿತಾಂಶದ ಮೇಲೆಯೇ ಇದೆ. ಅಫ್ಘಾನಿಸ್ತಾನದ ಸೆಮೀಸ್ ಆಸೆ ಜೀವಂತವಾಗಿರಿಸಲು, ಇಂದಿನ ಪಂದ್ಯ ಗೆಲ್ಲಬೇಕು. ಇನ್ನೂ ಹ್ಯಾಟ್ರಿಕ್​ ಗೆಲುವಿನೊಂದಿಗೆ ಸೆಮೀಸ್​​ಗೆ ಹತ್ತಿರ ಇರೋ ನ್ಯೂಜಿಲೆಂಡ್ ಸೆಮೀಸ್ ಹಾದಿಯೂ ಸುಲಭವಿಲ್ಲ.
ಯಾಕಂದ್ರೆ ಇಂದು ಸೋತರೆ ನ್ಯೂಜಿಲೆಂಡ್​ ಭವಿಷ್ಯ ಟೀಮ್ ಇಂಡಿಯಾದ ಗೆಲುವಿನ ಜೊತೆಗೆ ರನ್​ರೇಟ್ ಮೇಲಿರುತ್ತೆ. ಹೀಗಾಗಿ ಇಂದು ಗೆದ್ದು ಸೇಫ್​ ಆಗೋದೆ, ಕೇನ್ ವಿಲಿಯಮ್ಸನ್ ಪಡೆಯ ರಣತಂತ್ರವಾಗಿದೆ. ಇದರಿಂದಾಗಿಯೇ ಗ್ರೂಪ್ 2ರಲ್ಲಿ ಸೆಮೀಸ್​ ಪ್ರವೇಶ ಪಡೆಯುವ 2ನೇ ತಂಡ ಯಾವುದೆಂಬ ಕುತೂಹಲ, ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.

ಇಂಟರೆಸ್ಟಿಂಗ್ ವಿಚಾರ ಏನಾಂದ್ರೆ.. ಅಫ್ಘಾನಿಸ್ತಾನದ ಗೆಲುವಿಗೆ ಕಾಯ್ತಿರುವ ಟೀಮ್ ಇಂಡಿಯಾ, ನ್ಯೂಜಿಲೆಂಡ್​ ಬೃಹತ್ ಅಂತರದಲ್ಲಿ ಸೋಲಬಾರದೆಂಬ ಲೆಕ್ಕಚಾರವನ್ನೂ ಹಾಕ್ತಿದೆ. ಇದಕ್ಕೆ ಕಾರಣ, ರನ್​ರೇಟ್​ ಆಗಿದೆ. ಯಾಕಂದ್ರೆ, ಅಫ್ಘಾನಿಸ್ತಾನ +1.481 ರನ್​ರೇಟ್ ಹೊಂದಿದೆ. ಈ ವೇಳೆ ಬೃಹತ್ ಅಂತರದ ಗೆಲುವು ದಾಖಲಿಸಿದ್ರೆ, ಆಗ ರನ್​​ರೇಟ್ ಅನುಗುಣವಾಗಿ ಟೀಮ್ ಇಂಡಿಯಾ ಗೆಲುವು ದಾಖಲಿಸಬೇಕಿದೆ.

News First Live Kannada


Leave a Reply

Your email address will not be published. Required fields are marked *