ಸಿನಿಮಾ ರಂಗಕ್ಕೂ ಬರುವ ಮುನ್ನ ನಟ ಶಿವರಾಜ್​ಕುಮಾರ್​​ ಮದ್ರಾಸ್​​ನಲ್ಲಿ ತಮ್ಮ ಶಿಕ್ಷಣ ಪಡೆದಿದ್ದರು. ವಿದ್ಯಾಭ್ಯಾಸ ಒಂದೇ ಅಲ್ಲದೇ, ಅಂದಿನ ಮದ್ರಾಸ್​ನಲ್ಲೇ ನಟನೆ ಮೇಲೆ ಶಿಕ್ಷಣವನ್ನೂ ಪಡೆದಿದ್ದರು. ಸಿನಿಮಾ ಶಿಕ್ಷಣ ಪಡೆಯುತ್ತಿದ್ದ ವೇಳೆ, ಶಿವಣ್ಣ ನಟಿಸಿದ ಅಣ್ಣಾವ್ರ ಒಂದು ಹಾಡು ಸದ್ಯ ಕಣ್ಸೆಳೆಯುತ್ತಿದೆ.​

ಹೌದು.. 1982ರಲ್ಲಿ ತೆರೆಕಂಡ ಹಾಲು ಜೇನು ಸಿನಿಮಾದ “ಹಾಲು ಜೇನು” ಹಾಡನ್ನ ನಟ ಶಿವರಾಜ್​ಕುಮಾರ್​ ತಾವು ಮದ್ರಾಸ್​ನಲ್ಲಿ ಸಿನಿಮಾ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲೇ ರೀ-ಕ್ರಿಯೇಟ್​​ ಮಾಡಿದ್ದರು. ಬರೀ ಆಡಿಯೋ ಸಾಂಗ್​ ಅಲ್ಲ, ಆ್ಯಕ್ಟ್​ ಮಾಡುವ ಮೂಲಕ ವಿಡಿಯೋವೊಂದನ್ನೂ ತಯಾರಿಸಿದ್ದರು. ಸದ್ಯ ಶಿರಾಜ್​ಕುಮಾರ್​ ಅಭಿನಯದ ಆ ಹಾಡಿನ ವಿಡಿಯೋ ಅಭಿಮಾನಿಗಳ ಕೈ ಸೇರಿದೆ.

ಮದ್ರಾಸ್​​ನ ಫಿಲ್ಮ್​ ಇನ್​ಸ್ಟಿಟ್ಯೂಟ್​​ನಲ್ಲಿ ನಟನೆಯ ಟ್ರೈನಿಂಗ್​ ಪಡೆದುಕೊಳ್ತಿದ್ದ ಶಿವಣ್ಣ, ಹಾಲು ಜೇನಿನ ಕವರ್​ ಸಾಂಗ್​ನಲ್ಲಿ ಬಹಳ ಚಂದವಾಗಿಯೇ ನಟಸಿದ್ದಾರೆ. ಔಟ್​ಡೋರ್​ ಶೂಟ್​ ಮಾಡಲಾದ ಈ ಹಾಡಿಗೆ ಮೋಹನ್​ ಆ್ಯಕ್ಷನ್​ ಕಟ್​ ಹೇಳಿದ್ದು, ಸುಕುಮಾರ್​ ಕ್ಯಾಮೆರಾ ವರ್ಕ್​​ ಮಾಡಿದ್ದಾರೆ. ಶಿವಣ್ಣನ ಜೊತೆ ಜೋಡಿಯಾಗಿ ಸ್ಮಿತಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಡಾ.ರಾಜ್​ಕುಮಾರ್​ ನಟಿಸಿ ಹಾಡಿರುವ ಈ ಹಾಡು ಅಂದಿನ ಕಾಲಕ್ಕೆ ಅತ್ಯುತ್ತಮ ಹಾಡು ಅಂತಾನೇ ಗುರುತಿಸಿಕೊಂಡಿತ್ತು. ಇಂದಿಗೂ ಈ ಹಾಡನ್ನ ಇಷ್ಟ ಪಡದವರೇ ಇಲ್ಲ. ಸಿಂಗೀತಂ ಶ್ರೀನಿವಾಸ್​ ರಾವ್​ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ, ಮಾಧವಿ ಹಾಗೂ ರೂಪಾ ದೇವಿ ಡಾ.ರಾಜ್​ಕುಮಾರ್​ಗೆ ನಾಯಕಿರಾಗಿ ನಟಿಸಿದ್ದರು.

The post ಇಂದು ಅಭಿಮಾನಿಗಳ ಕಣ್ಸೆಳೆಯುತ್ತಿದೆ ಅಂದು ಶಿವರಾಜ್​ಕುಮಾರ್ ರೀ-ಕ್ರಿಯೇಟ್​​ ಮಾಡಿದ್ದ “ಹಾಲು ಜೇನು” ಹಾಡು appeared first on News First Kannada.

Source: newsfirstlive.com

Source link