ಇಂದು ಇಡೀ ದಿನ ಕಡತ ವಿಲೇವಾರಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ | CM Basavaraj Bommai clears Files Karnataka Govt


ಇಂದು ಇಡೀ ದಿನ ಕಡತ ವಿಲೇವಾರಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಇಡೀ ದಿನ ಕಡತ ವಿಲೇವಾರಿ ಮಾಡಿದ್ದಾರೆ. ಅಜ್ಞಾತ ಸ್ಥಳದಲ್ಲಿ ಬೊಮ್ಮಾಯಿ ಕಡತ ವಿಲೇವಾರಿ ಮಾಡಿದ್ದಾರೆ. ಕಡತ ವಿಲೇವಾರಿ ಕೆಲಸ ಮುಗಿಸಿ ನಿವಾಸಕ್ಕೆ ಸಿಎಂ ವಾಪಸ್​ ಆಗಿದ್ದಾರೆ. ಬೆಂಗಳೂರಿನ ಆರ್.ಟಿ. ನಗರದ ನಿವಾಸಕ್ಕೆ ಆಗಮಿಸಿದ್ದಾರೆ. ಬಹಳ ದಿನಗಳಿಂದ ಕಡತ ವಿಲೇವಾರಿ ಕೆಲಸ ಬಾಕಿ ಉಳಿದಿತ್ತು. ಉಪಚುನಾವಣೆಯಿಂದಾಗಿ ಕಡತ ವಿಲೇವಾರಿ ಬಾಕಿ ಉಳಿದಿತ್ತು. ಹೀಗಾಗಿ ಇಂದು (ನವೆಂಬರ್ 6) ಇಡೀ ದಿನ ಕಡತ ವಿಲೇವಾರಿಗೆ ಮೀಸಲಿಟ್ಟಿದ್ದರು. ಬೆಂಗಾವಲು ವಾಹನ ಬಿಟ್ಟು ಕೆಲ ಅಧಿಕಾರಿಗಳ ಜತೆ ತೆರಳಿದ್ದರು. ಕಡತ ವಿಲೇವಾರಿಗಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಸಿಎಂರಿಂದ ಇಂದು ಇಡೀ ದಿನ ಕಡತಗಳ ವಿಲೇವಾರಿ ಮಾಡುವ ಬಗ್ಗೆ ಹೇಳಲಾಗಿತ್ತು. ಬಹಳ ದಿನಗಳಿಂದ ಕಡತಗಳ ವಿಲೇವಾರಿ ಬಾಕಿ ಉಳಿದಿತ್ತು. ಬಾಕಿ ಕಡತಗಳ ವಿಲೇವಾರಿಗೆ ಇಂದು ಸಿಎಂ ಇಡೀ ದಿನ ಮೀಸಲಿಟ್ಟಿದ್ದರು. ರೇಸ್‌ಕೋರ್ಸ್ ರಸ್ತೆಯ ಕಚೇರಿಯಲ್ಲಿ ಕಡತ ವಿಲೇವಾರಿ ಮಾಡುವ ಬಗ್ಗೆ ಈ ಮೊದಲು ಹೇಳಲಾಗಿತ್ತು. ಕಡತ ವಿಲೇವಾರಿ ಬಾಕಿ ಉಳಿದಿದ್ದ ಕಾರಣ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ತೊಡಕಾಗಿತ್ತು. ಹೀಗಾಗಿ, ಇಂದು ಇಡೀ ದಿನ ಕಡತಗಳ ವಿಲೇವಾರಿ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೇರೆ ಯಾವುದೇ ಕಾರ್ಯಕ್ರಮ ನಿಗದಿ ಮಾಡಿಕೊಂಡಿರಲಿಲ್ಲ.

ಇದನ್ನೂ ಓದಿ: ಅಪ್ಪು ಮೇಲಿನ ಜನರ ಪ್ರೀತಿ ಅನುಸಾರ ಸರ್ಕಾರ ಅವರನ್ನು ಗೌರವಿಸಲಿದೆ: ಬಸವರಾಜ ಬೊಮ್ಮಾಯಿ ಹೇಳಿಕೆ

ಇದನ್ನೂ ಓದಿ: Bengaluru Rain: ರಾಜಕಾಲುವೆಯಲ್ಲಿ ಹೂಳು ತುಂಬಿರುವುದೇ ಹೆಚ್ಚು ಸಮಸ್ಯೆ- ತುರ್ತು ಸಭೆ ಬಳಿಕ ಸಿಎಂ ಬೊಮ್ಮಾಯಿ

TV9 Kannada


Leave a Reply

Your email address will not be published. Required fields are marked *