ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಆತಂಕದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸರಾಗವಾಗಿ ನಡೆಯುತ್ತಿದೆ. ಮೊದಲನೇ ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ ಎರಡನೇ ಪರೀಕ್ಷೆ ಇಂದು ನಡೆಯಲಿದ್ದು ಶಿಕ್ಷಣ ಇಲಾಖೆ ಸುರಕ್ಷಾ ಕ್ರಮಗಳ ಸಿದ್ಧತೆಯನ್ನು ಮಾಡಿಕೊಂಡಿದೆ.

ಇಂದು ರಾಜ್ಯಾದ್ಯಾಂತ SSLC ಎರಡನೇ ಪರೀಕ್ಷೆ ನಡೆಯಲಿದೆ. ಇಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದ್ದು ಒಟ್ಟು 4,885 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು 4,72,643 ಬಾಲಕರು 4,03,938 ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ಆರು ದಿನದ ಬದಲಿಗೆ ಎರಡು ದಿನ ನಡೆಯುತ್ತಿರುವ ಪರೀಕ್ಷೆ ಈಗಾಗಲೇ ಮೊದಲ ದಿನದಲ್ಲಿ ಕೋರ್ ವಿಷಯಗಳ ಪರೀಕ್ಷೆಯು ಯಶಸ್ವಿಯಾಗಿ ನಡೆದಿದೆ.

ಇದನ್ನೂ ಓದಿ: ‘ಕೇವಲ‌ ಪರೀಕ್ಷಾ ಕೇಂದ್ರವಲ್ಲ, ಸುರಕ್ಷಾ ಕೇಂದ್ರ; ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯಿರಿ’

ಇಂದು ಒಟ್ಟು ಮೂರು ವಿಷಯಗಳಿಗೆ 120 ಅಂಕಗಳ ಪರೀಕ್ಷೆ ನಡೆಯುತ್ತಿದ್ದು ಆಬ್ಜೆಕ್ಟಿವ್ ಮಾದರಿಯಲ್ಲಿ, ಪ್ರಶ್ನೆ ಪತ್ರಿಕೆ ಇರಲಿದೆ.
ಬೆಳಗ್ಗೆ: 10-30 ರಿಂದ 1-30ರವರೆಗೆ ಪರೀಕ್ಷೆ ನಡೆಯಲಿದ್ದು ಇದರಲ್ಲಿ ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ.

ದ್ವಿತೀಯ ಭಾಷೆ : ಇಂಗ್ಲಿಷ್, ಕನ್ನಡ

ತೃತೀಯ ಭಾಷೆ : ಹಿಂದಿ, ಕನ್ನಡ, ಇಂಗ್ಲಿಷ್ ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.

ಎನ್​ಎಸ್​ಕ್ಯೂಎಫ್ : ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯುಟಿ ಅಂಡ್ ವೆಲ್ ನೆಸ್ ವಿಷಯಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ರಥಮ ಭಾಷೆ

 • ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು- 8,19,694
 • ಹೊಸಬರು- 7,83,881.
 • ಖಾಸಗಿ ಅಭ್ಯರ್ಥಿಗಳು- 21,803.
 • ಪುನರಾವರ್ತಿತ ವಿದ್ಯಾರ್ಥಿಗಳು- 14,010

ದ್ವಿತೀಯ ಭಾಷೆ

 • ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು- 8,27,988
 • ಹೊಸಬರು 7,83,881.
 • ಖಾಸಗಿ ಅಭ್ಯರ್ಥಿಗಳು 21,803.
 • ಪುನರಾವರ್ತಿತ ವಿದ್ಯಾರ್ಥಿಗಳು- 22,304

ತೃತೀಯ ಭಾಷೆ

 • ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು- 8,17,640
 • ಹೊಸಬರು 7,83,881
 • ಖಾಸಗಿ ಅಭ್ಯರ್ಥಿಗಳು 21,803,
 • ಪುನರಾವರ್ತಿತ ವಿದ್ಯಾರ್ಥಿಗಳು 11,956

ಕೊರೊನಾ ಆತಂಕದ ನಡುವೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಕೆಮ್ಮು, ನೆಗಡಿ, ಜ್ವರ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನು ಕೂಡ ಮಾಡಿದೆ.

ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಕೊಠಡಿಗಳಿಗೆ ಸ್ಯಾನಿಟೈಸೆಷನ್ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಾಸ್ಕ್​ ವಿತರಿಸಲಾಗುತ್ತಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕೌಂಟರ್ ಜೊತೆಗೆ ತುರ್ತು ಚಿಕಿತ್ಸಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಜಿಲ್ಲೆಗೆ ನೋಡೆಲ್ ಆಫೀಸರ್ ನೇಮಕ ಮಾಡಲಾಗಿದೆ.

ರಾಜ್ಯಾದ್ಯಂತ 73066 ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು 4884 ಮುಖ್ಯಅಧೀಕ್ಷಕರು, 4884 ಪ್ರಶ್ನೆಪತ್ರಿಕೆ ಅಭಿರಕ್ಷಕರು, 80389 ಕೊಠಡಿ ಮೇಲ್ವಿಚಾರಕರು, 4884 ಸ್ಥಾನಿಕ ಜಾಗೃತ ದಳದವರು ಇಂದಿನ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

The post ಇಂದು ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ: ಕೊನೆಯ ಪರೀಕ್ಷೆಗೆ ಸಜ್ಜಾದ ವಿದ್ಯಾರ್ಥಿಗಳು appeared first on News First Kannada.

Source: newsfirstlive.com

Source link