ಕೊರೊನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿರುವ 14ನೇ ಆವೃತ್ತಿ ಐಪಿಎಲ್​ ಟೂರ್ನಿಯ ಉಳಿದ ಪಂದ್ಯಗಳನ್ನ ಯುಎಇನಲ್ಲಿ ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದ್ದು, ಇಂದು ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಒಟ್ಟು 31 ಪಂದ್ಯಗಳ ಆಯೋಜನೆ ಬಾಕಿ ಉಳಿದಿದ್ದು, ಸಪ್ಟೆಂಬರ್​​ 19ರಿಂದ ಅಕ್ಟೋಬರ್​ 15ರ ನಡುವೆ ಪಂದ್ಯಗಳ ಆಯೋಜನೆ ಬಹುತೇಕ ಖಚಿತವಾಗಿದೆ. ಆದ್ರೆ, ಉಳಿದ ಪಂದ್ಯಗಳಿಗೆ ವಿದೇಶಿ ಆಟಗಾರರ ಅಲಭ್ಯತೆ ಕಾಡಲಿದೆ ಎನ್ನಲಾಗ್ತಿದೆ. ಈ ಬಗ್ಗೆ ಉಳಿದ ಮಂಡಳಿಗಳೊಂದಿಗೂ ಚರ್ಚೆ ನಡೆಸಿರುವ ಬಿಸಿಸಿಐ, ಎಲ್ಲವೂ ಸರಿಹೊಂದುವಂತೆ ಪಂದ್ಯಗಳ ಆಯೋಜನೆಗೆ ಸಿದ್ಧತೆ ನಡೆಸಿದೆ.

 

 

The post ಇಂದು ಐಪಿಎಲ್-14 PHASE 2 ವೇಳಾಪಟ್ಟಿ ಬಿಡುಗಡೆ..? appeared first on News First Kannada.

Source: newsfirstlive.com

Source link