ಇಂದು ಕೋರ್ಟ್‌ಗೆ ಹಾಜರಾಗಲಿರುವ ಹ್ಯಾಕರ್ ಶ್ರೀಕಿ ಮತ್ತು ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣು ಭಟ್ | Hacker Sriki and bhima jewellers owner son vishnu bhatt to produce before the court in Bengaluru today


ಇಂದು ಕೋರ್ಟ್‌ಗೆ ಹಾಜರಾಗಲಿರುವ ಹ್ಯಾಕರ್ ಶ್ರೀಕಿ ಮತ್ತು ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣು ಭಟ್

ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ

ಬೆಂಗಳೂರು: ನಗರದ ಹೋಟೆಲ್ನಲ್ಲಿ ವೆಬ್ಸೈಟ್ಗಳ ಹ್ಯಾಕರ್ ಶ್ರೀಕಿ ಮತ್ತು ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣು ಭಟ್ ಪುಂಡಾಟ ಪ್ರಕರಣ ಸಂಬಂಧ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿ ಡ್ರಿಲ್ ನಡೆಸ್ತಿದ್ದಾರೆ. ಅಲ್ದೆ, ಖಾಸಗಿ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ಸಂಬಂಧ ಹ್ಯಾಕರ್ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣುಭಟ್ ನಶೆಯಲ್ಲಿದ್ರು ಅನ್ನೋದು ಗೊತ್ತಾಗಿದೆ. ಇವತ್ತು ಮತ್ತೆ ಇವರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುತ್ತಿದೆ.

ಜೀವನ್ ಭೀಮಾನಗರದ ಸ್ಟಾರ್ ಹೋಟೆಲ್ ಸಿಬ್ಬಂದಿಗೆ ಹಲ್ಲೆ ಮಾಡಿದ ಕೇಸ್ನಲ್ಲಿ ಶ್ರೀಕಿ ಮತ್ತು ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್ ಪೊಲೀಸರ ಅತಿಥಿಯಾಗಿದ್ದಾರೆ. ವಿಚಾರಣೆ ವೇಳೆ ಬಹಳಷ್ಟು ವಿಚಾರ ಬಹಿರಂಗವಾಗಿದೆ. ಸದ್ಯ ವಿಷ್ಣು ಭಟ್, ಶ್ರೀಕೃಷ್ಣಗೆ ಒಂದು ದಿನ ನ್ಯಾಯಾಂಗ ಬಂಧನವಾಗಿದ್ದು ಪೊಲೀಸರು ಆರೋಪಿಗಳಿಬ್ಬರನ್ನೂ ಇಂದು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಜೆ.ಬಿ.ನಗರ ಪೊಲೀಸರು ನಿನ್ನೆ ಸಂಜೆ ಆರೋಪಿಗಳನ್ನು ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್‌ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್‌ನಲ್ಲಿ ಹಾಜರುಪಡಿಸುವಂತೆ ಸೂಚನೆ ಸಿಕ್ಕಿತ್ತು. ಇದೇ ವೇಳೆ 1 ದಿನ ನ್ಯಾಯಾಂಗ ಬಂಧನಕ್ಕೆ ಜಡ್ಜ್ ಆದೇಶಿಸಿದ್ದರು. ಹೀಗಾಗಿ ಪೊಲೀಸರು ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಶ್ರೀಕಿ ಹಾಗೂ ವಿಷ್ಣುಭಟ್ ಡ್ರಗ್ಸ್ ಸೇವನೆ ಕನ್ಫರ್ಮ್
ಆರೋಪಿಗಳಿಬ್ಬರಿಗೂ ಆಲ್ಕೋಹಾಲ್ ಟೆಸ್ಟ್ ಹಾಗೂ ನಾರ್ಕೋಟಿಕ್ ಟೆಸ್ಟ್ ಪರೀಕ್ಷೆ ನಡೆಸಲಾಗಿದೆ. ಇದ್ರಲ್ಲಿ ಇಂಟರ್ ನ್ಯಾಷನಲ್ ಹ್ಯಾಕರ್ ಆಗಿರೋ ಶ್ರೀಕಿ ಹಾಗೂ ವಿಷ್ಣುಭಟ್ ಡ್ರಗ್ಸ್ ಸೇವಿಸಿರೋದು ಕನ್ಫರ್ಮ್ ಆಗಿದೆ. ಈ ಸಂಬಂಧ ಎನ್ಡಿಪಿಎಸ್ ಆಕ್ಟ್ನಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮತ್ತುಷ್ಟು ಚುರುಕುಗೊಳಿಸಿದ್ದಾರೆ.

ವಿಷ್ಣು ಭಟ್ ಮನೆಯಲ್ಲಿ ಪೌಡರ್ ಮಾದರಿಯ ಡ್ರಗ್ಸ್ ಪತ್ತೆ
ಇನ್ನು, ಇಬ್ಬರು ಡ್ರಗ್ಸ್ ಸೇವಿಸಿದ್ರು ಅಂತಾ ಗೊತ್ತಾಗ್ತಿದ್ದಂತೆ ಪೊಲೀಸರು ಇಂದಿರಾ ನಗರದ ವಿಷ್ಣು ಭಟ್ ಮನೆಗೆ ವಿಸಿಟ್ ಕೊಟ್ಟು ಸರ್ಚ್ ಮಾಡಿದ್ದಾರೆ. ಈ ವೇಳೆ ಸಿಗರೇಟ್ ಬಟ್ಸ್ ಒಳಗೆ ಮಾದಕ ವಸ್ತು ಪತ್ತೆಯಾಗಿದ್ದೆ. ಸಿಗರೇಟ್ ಮೂಲಕ ಡ್ರಗ್ ಸೇವನೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ವಿಷ್ಣು ಭಟ್ ಮನೆಯಲ್ಲಿ ಪೌಡರ್ ಮಾದರಿಯ ಡ್ರಗ್ಸ್ ಪತ್ತೆಯಾಗಿದ್ದು, ಡ್ರಗ್ಸ್ನ್ನು ವಿಷ್ಣು ಭಟ್ಗೆ ಸಪ್ಲೈ ಮಾಡಿದ್ದು ಯಾರು? ಡ್ರಗ್ಸ್ ಮೂಲ ಯಾವುದು ಅನ್ನೋದ್ರ ಕುರಿತು ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆಯಲ್ಲಿ ಹ್ಯಾಕರ್ ಶ್ರೀಕಿ, ವಿಷ್ಣು ಭಟ್ ಮಾದಕ ವಸ್ತು ಸೇವಿಸಿರುವುದು ದೃಢ

TV9 Kannada


Leave a Reply

Your email address will not be published.