ಮಂಡ್ಯ: ಮಾಜಿ ಸಂಸದ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವ್ರು ವಯೋಸಹಜ ಕಾಯಿಲೆಯಿಂದ ನಿಧನವಾಗಿದ್ದಾರೆ. ಮಂಡ್ಯದ ಕೆ.ಎಂ ದೊಡ್ಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾದೇಗೌಡ ಅವ್ರು ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರು ಎಳೆದಿದ್ದಾರೆ. ಇವತ್ತು ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಇವ್ರ ಅಂತ್ಯಕ್ರಿಯೆ ನೆರವೇರಿಲಿದೆ.

ಮಂಡ್ಯದ ಮಾಜಿ ಸಂಸದ ಹಾಗೂ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ. ಮಾದೇಗೌಡ ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸ್ಥತಿ ಹದಗೆಟ್ಟಿದ್ದರಿಂದ ಕೆ.ಎಂ ದೊಡ್ಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೇ ನಿನ್ನೆ ವಿಧಿವಶರಾಗಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರೋ 94 ವರ್ಷದ ಜಿ. ಮಾದೇಗೌಡ ಅವರ ಅಂತ್ಯಕ್ರಿಯೆ ಇವತ್ತು ನಡೆಯಲಿದೆ. ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು ಇದಕ್ಕಿಂತ ಮುಂಚಿತವಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು ಇದಕ್ಕಿಂತ ಮುಂಚಿತವಾಗಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹುಟ್ಟುರಾದ ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಮತ್ತು ಭಾರತೀ ಕಾಲೇಜಿನಲ್ಲಿ ಸಾರ್ವಜಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2.30 ರ ಸುಮಾರಿಗೆ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಅಂತಾ ಜಿ‌ ಮಾದೇಗೌಡ ಪುತ್ರ ಮಧು ಜಿ ಮಾದೇಗೌಡ ಮಾಹಿತಿ ನೀಡಿದ್ದಾರೆ.

ಇನ್ನು, ಮಂಡ್ಯದಲ್ಲಿ ರಾಜಕಾರಣ, ಹಾಗೂ ಹೋರಾಟದ ಹಾದಿಯಲ್ಲಿ ತಮ್ಮದೇ ವಿಶಿಷ್ಠವಾಗಿ ನಡೆಯೊಂದಿಗೆ ಜಿ. ಮಾದೇಗೌಡರು ಮಾದರಿಯಾಗಿದ್ರು.

 ಜಿ.ಮಾದೇಗೌಡರ ಸಾಧನೆ ಹಾದಿ

 • 1962ರಿಂದ ಕಿರುಗಾವಲು ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಸ್ಪರ್ಧೆ
 • ಆರು ಬಾರಿ ಸತತವಾಗಿ ಗೆದ್ದು ಗೆಲವಿನ ನಗೆ ಬೀರಿದ್ದ ಜಿ. ಮಾದೇಗೌಡ
 • 1962, 1967, 1972, 1983, 1985ರ ಚುನಾವಣೆಯಲ್ಲಿ ಸತತ ಗೆಲುವು
 • ಸೋಲಿಲ್ಲದ ಸರದಾರ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದ್ರು ಮಾದೇಗೌಡ
 • 1980- 83ರಲ್ಲಿ ಗುಂಡೂರಾವ್​ ಸಂಪುಟದಲ್ಲಿ ಗಣಿ, ಭೂ ವಿಜ್ಞಾನ ಸಚಿವ
 • 1989, 1995ರಲ್ಲಿ 2 ಬಾರಿ ಮಂಡ್ಯ ಸಂಸದರಾಗಿ ಗೆದ್ದು ಬಂದ್ರು ಮಾದೇಗೌಡ
 • 1996ರಲ್ಲಿ ಕಾವೇರಿ ಹೋರಾಟ ತೀವ್ರವಾದಾಗ ಸಂಸದ ಸ್ಥಾನಕ್ಕೆ ರಾಜೀನಾಮೆ
 • ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾವೇರಿ ಹೋರಾಟದಲ್ಲಿ ಭಾಗಿ
 • 1996ರ ಲೋಕಸಭೆ ಚುನಾವಣೆಯಲ್ಲಿ ಕೆ.ಆರ್​.ಪೇಟೆ ಕೃಷ್ಣ ವಿರುದ್ಧ ಸೋಲು
 • 1998ರ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್​ ವಿರುದ್ಧ ಸೋಲು
 • 2003ರಲ್ಲಿ ಕಾವೇರಿ ಹೋರಾಟ ನಡೆದಾಗ ಕಾಂಗ್ರೆಸ್​ ವಿರುದ್ಧವೇ ಟೀಕಾಸ್ತ್ರ
 • ಕಾಂಗ್ರೆಸ್​ ನಡೆಯನ್ನು ಟೀಕಿಸಿ ನೇರ ರಾಜಕಾರಣಿ ಅಂತ ಕರೆಸಿಕೊಂಡಿದ್ದರು

ಹೀಗೆ ರಾಜಕಾರಣ, ಸಮಾಜಿಕ ಹೋರಾಟದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳೋ ಮೂಲಕ ಜನಪರ ನಾಯಕ ಅನ್ನೋ ಮೆಚ್ಚುಗೆಯನ್ನ ಜಿ ಮಾದೇಗೌಡ ಪಡೆದುಕೊಂಡಿದ್ದರು. ಕಟುಂಬ ಹಾಗೂ ಅಪಾರ ಬೆಂಬಲಿಗರನ್ನ ಅಗಲಿದ ಜಿ. ಮಾದೇಗೌಡರ ಅಂತ್ಯಕ್ರಿಯೆ ಇವತ್ತು ಮದ್ದೂರು ತಾಲೂಕಿನ ಹನುಮಂತನಗರಲ್ಲಿ ನೆರವೇರಲಿದೆ.

The post ಇಂದು ಜಿ.ಮಾದೇಗೌಡರ ಅಂತ್ಯಕ್ರಿಯೆ- ಹುಟ್ಟೂರು ಗುರುದೇವರಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ appeared first on News First Kannada.

Source: newsfirstlive.com

Source link