ಇಂದು ಟಿ-20 ವಿಶ್ವಕಪ್​​ ಫೈನಲ್; ಯಾವ ತಂಡಕ್ಕೆ ಗೆಲುವಿನ ಹೆಚ್ಚು ಚಾನ್ಸ್​​ ಇದೆ ಗೊತ್ತಾ..?


2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಂತಿಮ ಹಂತ ತಲುಪಿದ್ದು, ಇಂದು ವಿಶ್ವಕಪ್​​ಗಾಗಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ. ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣ ಈ ಕ್ಷಣಕ್ಕಾಗಿ ಸಿದ್ಧವಾಗಿದೆ.

ವಿಶೇಷ ಅಂದ್ರೆ ನ್ಯೂಜಿಲೆಂಡ್​ ಇದೇ ಮೊದಲ ಬಾರಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡ 2010ರಲ್ಲಿ ಫೈನಲ್‌ ತಲುಪಿ, ಇಂಗ್ಲೆಂಡ್‌ ವಿರುದ್ಧ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ: ಆಯ್ಕೆ ಸಮಿತಿ ವಿರುದ್ಧ ಶಾಸ್ತ್ರಿ ಹೊಸ ಬಾಂಬ್; ಗಂಗೂಲಿ ಆಡಳಿತದ ಅವಧಿಯಲ್ಲೇ ಹೀಗ್ಯಾಕೆ ಆಯ್ತು..?

ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನ
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟೀಮ್ ಸೀಫರ್ಟ್​, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಆ್ಯಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೋಲ್ಟ್


ಆಸ್ಟ್ರೇಲಿಯಾ: ಫಿಂಚ್‌ (ನಾಯಕ), ವಾರ್ನರ್‌, ಮಿಚೆಲ್‌ ಮಾರ್ಶ್​, ಮ್ಯಾಕ್ಸ್‌ವೆಲ್‌, ಸ್ಟೀವ್​​ ಸ್ಮಿತ್‌, ಸ್ಟೋಯ್ನಿಸ್‌, ಮ್ಯಾಥ್ಯೂ ವೇಡ್‌, ಪ್ಯಾಟ್​ ಕಮಿನ್ಸ್‌, ಮಿಚೆಲ್ ಸ್ಟಾರ್ಕ್, ಆ್ಯಂಡ್​ ಜಂಪಾ, ಹೇಜಲ್‌ವುಡ್‌
ಪಿಚ್​ ರಿಪೋರ್ಟ್​​

ದುಬೈ ಪಿಚ್​ ಬೌಲರ್​ಗಳಿಗೆ ಹೆಚ್ಚಿನ ನೆರವು

 • 160-170 ರನ್​ ಕಾಂಪಿಟೇಟಿವ್ ಸ್ಕೋರ್
 • 2ನೇ ಇನ್ನಿಂಗ್ಸ್‌ ವೇಳೆ ಬೌಲರ್​​ಗಳಿಗೆ ಅಗ್ನಿಪರೀಕ್ಷೆ​​​​
 • ಪಂದ್ಯದ ಫಲಿತಾಂಶದಲ್ಲಿ ಟಾಸ್ ನಿರ್ಣಾಯಕ ಪಾತ್ರ
 • ಟಾಸ್‌ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಬಹುತೇಕ ಖಚಿತ

ನ್ಯೂಜಿಲೆಂಡ್​ಗೆ ಪ್ಲಸ್​-ಮೈನಸ್​

 • ಡ್ಯಾರಿಲ್ ಮಿಚೆಲ್, ಮಾರ್ಟಿನ್​​ ಗಪ್ಟಿನ್ ಸ್ಫೋಟಕ ಓಪನಿಂಗ್​​​
 • ಕೇನ್​ ವಿಲಿಯಮ್ಸನ್ ಜವಾಬ್ದಾರಿಯುತ ಆಟ & ನಾಯಕತ್ವ
 • ನೀಶಮ್​ ಆಲ್​ರೌಂಡರ್​ ಪರ್ಫಾಮೆನ್ಸ್ & ಬೆಸ್ಟ್​ ಫೀಲ್ಡಿಂಗ್​
 • ಉತ್ತಮ ಲಯದಲ್ಲಿದ್ದಾರೆ ಕಿವೀಸ್​ ವೇಗಿಗಳು & ಸ್ಪಿನ್ನರ್ಸ್
 • ನಿರ್ಣಾಯಕ ​ಘಟ್ಟದಲ್ಲಿ ದಿಢೀರ್ ಕುಸಿತ, ಅಸ್ಥಿರ ಬ್ಯಾಟಿಂಗ್

ಆಸ್ಟ್ರೇಲಿಯಾ ತಂಡ ಪ್ಲಸ್​​-ಮೈನಸ್​

 • ಫಿಂಚ್​,​ ಡೇವಿಡ್ ವಾರ್ನರ್ ಬ್ಯಾಟಿಂಗ್ ಫಾರ್ಮ್
 • ತಂಡದಲ್ಲಿ ಟಿ20 ಸ್ಪೆಷಲಿಸ್ಟ್​ ಆಟಗಾರರ ದಂಡು
 • ಜಂಪಾ, ಹೇಜಲ್​​ವುಡ್ ಪರಿಣಾಮಕಾರಿ ಬೌಲಿಂಗ್
 • ಸ್ಟೀವ್ ಸ್ಮಿತ್, ಮ್ಯಾಕ್ಸ್​ವೆಲ್ ವೈಫಲ್ಯ ತಂಡಕ್ಕೆ ಹಿನ್ನಡೆ

ಎಕ್ಸ್​-ಫ್ಯಾಕ್ಟರ್​​ ಪ್ಲೇಯರ್ಸ್​

ಡೇವಿಡ್ ವಾರ್ನರ್

 • ಪಂದ್ಯ 06
 • ರನ್ 236
 • ಸರಾಸರಿ 47.20
 • ಸ್ಟ್ರೈಕ್​​ರೇಟ್​ 148.42

ಆ್ಯಡಂ ಜಂಪಾ

 • ಪಂದ್ಯ 09
 • ವಿಕೆಟ್ 16
 • ಎಕಾನಮಿ 5.80

ಜೋಶ್ ಹೇಜಲ್​​ವುಡ್

 • ಪಂದ್ಯ 09
 • ವಿಕೆಟ್ 16
 • ಎಕಾನಮಿ 5.80

ಇದನ್ನೂ ಓದಿ: ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಶೋ ಮ್ಯಾನ್ ಪ್ರೇಮ್.. ಎಣ್ಣೆ ಹಾಡಿನಲ್ಲಿ ಚಳಿಬಿಟ್ಟು ಕುಣಿದ ರಚಿತಾ ರಾಮ್

ಇದನ್ನೂ ಓದಿ: 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಆರೋಪಿಯೂ ಎನ್​​ಕೌಂಟರ್; ಮಿಲಿಂದ್ ಕೊಂದವ್ರಿಗೆ ಸಿಕ್ತು ₹25 ಲಕ್ಷ

ಇದನ್ನೂ ಓದಿ: ಆಯ್ಕೆ ಸಮಿತಿ ವಿರುದ್ಧ ಶಾಸ್ತ್ರಿ ಹೊಸ ಬಾಂಬ್; ಗಂಗೂಲಿ ಆಡಳಿತದ ಅವಧಿಯಲ್ಲೇ ಹೀಗ್ಯಾಕೆ ಆಯ್ತು..?

News First Live Kannada


Leave a Reply

Your email address will not be published. Required fields are marked *