ಬೆಂಗಳೂರು: ಇಂದು ರಾಜ್ಯಕ್ಕೆ ಮಹತ್ವದ ದಿನ. 500ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ಸಂಪರ್ಕದಲ್ಲಿದ್ದವರು ಹಾಗೂ ಶಂಕಿತ ಸೋಂಕಿತರ ಜಿನೋಮಿಕ್ ಸಿಕ್ವೆನ್ಸಿಂಗ್ ವರದಿ ಇಂದು ಬರಲಿದ್ದು, ಆತಂಕ ಹೆಚ್ಚಾಗಿದೆ.

ಮೂರು ದಿನಗಳ ಹಿಂದೆ ಸ್ಯಾಂಪಲ್ಸ್ ಸಂಗ್ರಹ ಮಾಡಿ, ನಿಮಾನ್ಸ್ ಹಾಗೂ NCBS ಲ್ಯಾಬ್‍ಗೆ ಕಳುಹಿಸಲಾಗಿತ್ತು. 500 ಜನರಲ್ಲಿ ಎಷ್ಟು ಜನರಿಗೆ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಅಟ್ಯಾಕ್ ಆಗಿದೆ ಎಂಬುದು ಇಂದು ದೃಢವಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಒಂದು ಪ್ರಕರಣ, ಮೈಸೂರಿನಲ್ಲಿ ಒಂದು ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಡೆಲ್ಟಾ ಪ್ಲಸ್ ಸೋಂಕಿತನ ಸಂಪರ್ಕದಲ್ಲಿದ್ದ ಐವರ ಪೈಕಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ವ್ಯಕ್ತಿಯ ಜಿನೋಮಿಕ್ ಸಿಕ್ವೆನ್ಸಿಂಗ್ ನ್ನು ಕೂಡ ಲ್ಯಾಬ್‍ಗೆ ಕಳುಹಿಸಲಾಗಿದೆ.

ಸದ್ಯ ಆರೋಗ್ಯ ಇಲಾಖೆಗೂ ಢವಢವ ಶುರುವಾಗಿದ್ದು, 500ಕ್ಕೂ ಹೆಚ್ಚು ಜನರ ರಿಪೋರ್ಟ್ ಏನಾಗಲಿದೆ ಎಂಬ ಆತಂಕದಲ್ಲಿದೆ. 500 ಜನರ ಪೈಕಿ 10 ಜನರಿಗೆ ಸೋಂಕು ಹಬ್ಬಿದ್ರೂ, ಪರಿಸ್ಥಿತಿ ಕಠೋರತೆಗೆ ತಲುಪಲಿದೆ ಎಂಬ ಭಯವನ್ನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಏರಿಕೆ

ಇವರೆಗೆ ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶ 8, ಕೇರಳ 3, ತಮಿಳುನಾಡು 9, ಪಂಜಾಬ್ 2, ಆಂದ್ರಪ್ರದೇಶ 1, ಜಮ್ಮು ಕಾಶ್ಮೀರ 1, ಗುಜರಾತ್ 2 ಹಾಗೂ ಕರ್ನಾಟಕದಲ್ಲಿ ಎರಡು ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದನ್ನೂ ಓದಿ: AOMSI ನಿಂದ UK ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ

The post ಇಂದು ಡೆಲ್ಟಾ ಪ್ಲಸ್ ಶಂಕಿತ ಸೋಂಕಿತರ ವರದಿ ಪ್ರಕಟ appeared first on Public TV.

Source: publictv.in

Source link