ಇಂದು ಡೆಲ್ಲಿ ಕ್ಯಾಪಿಟಲ್ಸ್​ ಸವಾಲು: ಜಯದ ಲಯಕ್ಕೆ ಮರಳುವುದೇ ಆರ್​ಸಿಬಿ?

ಸತತ ನಾಲ್ಕು ಜಯದ ನಂತರ ಸೋಲಿನ ಕಹಿ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲೊಡ್ಡಲಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕೆ ನಾಲ್ಕನೇ ಸ್ಥಾನದಲ್ಲಿರುವ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ ತಂಡ ಟಕ್ಕರ್ ಕೊಡಲು ಸಿದ್ಧವಾಗಿದೆ.

ಎರಡು ತಂಡದಲ್ಲಿ ಸ್ಪೋಟಕ ಬ್ಯಾಟ್​​ಮ್ಯಾನ್​ಗಳು ಇರೋದ್ರಿಂದ ಅಹಮದಾಬಾದ್​ನ ಕ್ರೀಡಾಣಗಣದಲ್ಲಿ ಇಂದು ರನ್​ ಮಳೆ ಸುರಿಯುವ ನಿರೀಕ್ಷೆಯಿದೆ. ಚೆನ್ನೈ ವಿರುದ್ಧ ಒಂದು ಪಂದ್ಯ ಸೋತಿರುವ ಆರ್​ಸಿಬಿ ಜಯದ ಲಯಕ್ಕೆ ಮರಳಲಿ ಎಂದು ಡೈ ಹಾರ್ಡ್​ ಫ್ಯಾನ್ಸ್​ ಪ್ರಾರ್ಥಿಸುತ್ತಿದ್ದಾರೆ.

The post ಇಂದು ಡೆಲ್ಲಿ ಕ್ಯಾಪಿಟಲ್ಸ್​ ಸವಾಲು: ಜಯದ ಲಯಕ್ಕೆ ಮರಳುವುದೇ ಆರ್​ಸಿಬಿ? appeared first on News First Kannada.

Source: News First Kannada
Read More