ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,08,921 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 4,157 ಮಂದಿ ಮೃತಪಟ್ಟಿದ್ದಾರೆ. 2,95,955 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವ್ ಆದವರಿಗಿಂತ ಇಂದು ಕೂಡ ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ 4 ಸಾವಿರಕ್ಕಿಂತ ಹೆಚ್ಚಿದೆ.

ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,71,57,795 ಹಾಗೂ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,43,50,816. ಒಟ್ಟು 3,11,388 ಮಂದಿ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ 24,95,591 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೊನಾ ಅಂಕಿ-ಅಂಶಗಳು

  • ಒಟ್ಟು ಪ್ರಕರಣಗಳು- 2,71,57,795
  • ಒಟ್ಟು ಗುಣಮುಖರಾದವರು- 2,43,50,816
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರು-3,11,388
  • ಸಕ್ರಿಯ ಪ್ರಕರಣಗಳು- 24,95,591
  • ಈವರೆಗೆ ವ್ಯಾಕ್ಸಿನ್ ಪಡೆದವರು- 20,06,62,456

The post ಇಂದು ದೇಶದಲ್ಲಿ 2,08,921 ಹೊಸ ಕೇಸ್​​, 2,95,955 ಮಂದಿ ಡಿಸ್ಚಾರ್ಜ್ appeared first on News First Kannada.

Source: newsfirstlive.com

Source link