ಬೆಂಗಳೂರು: ಕೊರೊನಾ ನಡುವೆ ತಮ್ಮ ಜೀವವನ್ನ ಪಣಕ್ಕಿಟ್ಟು ಕೆಲಸ ಮಾಡ್ತಿರೋ ದಾದಿಯರನ್ನ ಶ್ಲಾಘಿಸಲು ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.

ಅದರಂತೆ ಇಂದು ಬೆಳಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನರ್ಸ್​​ಗಳ ಜೊತೆ ಸಂವಾದ ನಡೆಸಲಿದ್ದಾರೆ. ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿರುವ ರೋಗಿಗಳ ಶುಶ್ರೂಷೆ ಮಾಡ್ತಿರುವ ನರ್ಸ್​ಗಳ ಜೊತೆ ಚರ್ಚಿಸಲಿದ್ದಾರೆ.

ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣದಿಂದ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ. ಈ ವೇಳೆ ದಾದಿಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸೆ ಮಾಡಲಿದ್ದಾರೆ. ಇದೇ ವೇಳೆ ಕೊರೊನಾ ವಾರಿಯರ್​​ ಆಗಿ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಏನಾದರೂ ಸಹಿ ಸುದ್ದಿ ನೀಡಲಿದ್ದಾರಾ ಅನ್ನೋ ನಿರೀಕ್ಷೆ ಕೂಡ ಹುಟ್ಟುಹಾಕಿದೆ.

The post ಇಂದು ನರ್ಸ್​​ಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್​.. ದಾದಿಯರಿಗೆ ಸಿಗುತ್ತಾ ಸಿಹಿ ಸುದ್ದಿ? appeared first on News First Kannada.

Source: newsfirstlive.com

Source link