ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಈವರೆಗೆ 26 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಬೆಂಗಳೂರು 12 ಪಂದ್ಯವನ್ನೂ ಗೆದ್ರೆ. ಕೋಲ್ಕತ್ತಾ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ ಇಂದು ಆರ್​​ಸಿಬಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುವ ಸಲುವಾಗಿ ನೀಲಿ ಬಣ್ಣದ ಜೆರ್ಸಿ ತೊಟ್ಟು ಆಡಲಿದೆ. ಕಳೆದ ಒಂದು ವರ್ಷದಿಂದ ಫ್ರಂಟ್​ಲೈನ್​ ಕೊರೊನಾ ವಾರಿಯರ್ಸ್​ ಪಿಪಿಇ ಕಿಟ್​ನಲ್ಲೇ ಪ್ರತಿದಿನ ಕೆಲಸ ಮಾಡ್ತಿರೋದ್ರಿಂದ ಅವರಿಗೆ ಗೌರವ ಸೂಚಿಸಲು ಬ್ಲೂ ಜೆರ್ಸಿ ತೊಟ್ಟು ಆಡಲಿದ್ದಾರೆ.

ಪಂದ್ಯದ ಬಳಿಕ ಜರ್ಸಿಯನ್ನ ಹಾರಾಜು ಹಾಕಿ ಅದರಲ್ಲಿ ಬಂದ ಹಣದಲ್ಲಿ ಆರೋಗ್ಯ ಮೂಲ ಸೌಕರ್ಯ ಒದಗಿಸಲು ಆರ್​​ಸಿಬಿ ಸಹಾಯ ಮಾಡಲಿದೆ. Give India ಮೂಲಕ ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ ಆಕ್ಸಿಜನ್ ಪೂರೈಕೆ ಮಾಡಲು ಹಣ ನೀಡಲಿದೆ.

The post ಇಂದು ನೀಲಿ ಜೆರ್ಸಿಯಲ್ಲಿ ಆಡಲಿರೋ RCB, ಹರಾಜಿನಿಂದ ಬಂದ ಹಣ ಕೊರೊನಾ ಸಮರಕ್ಕೆ ನೆರವು appeared first on News First Kannada.

Source: newsfirstlive.com

Source link