ಇಂದು ಪಾಕ್​​ ವಿರುದ್ಧ ಆಸ್ಟ್ರೇಲಿಯಾ ಗೆಲ್ಲೋದು ಪಕ್ಕಾ​​; ಹೀಗೆ ಹೇಳುತ್ತಿದೆ ಪಿಚ್​ ರಿಪೋರ್ಟ್


ಇಂದು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​​​​​​ ಸೆಮಿಫೈನಲ್-​​​2 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿವೆ. ಎರಡು ತಂಡಗಳು ಬೌಲಿಂಗ್​​ ಮತ್ತು ಬ್ಯಾಟಿಂಗ್​​​​ ವಿಭಾಗದಲ್ಲೂ ಬಲಿಷ್ಠವಾಗಿವೆ. ಹೀಗಾಗಿ ಅಮೋಘ ಫಾರ್ಮ್‌ನಲ್ಲಿ ಕಣಕ್ಕಿಳಿದಿರುವ ತಂಡಗಳು ಭಾರೀ ಮೊತ್ತ ಪೇರಿಸಲಿವೆ. ಹೀಗಾಗಿ ಯಾವ ಟೀಂ ಗೆಲ್ಲಲಿದೆ ಎಂಬ ಚರ್ಚೆಗಳು ಸಹಜವಾಗಿಯೇ ನಡೆಯುತ್ತಿವೆ.

ಇನ್ನು, ಇದರ ನಡುವೇ ದುಬೈ ಇಂಟರ್​​ನ್ಯಾಷನಲ್​​ ಸ್ಟೇಡಿಯಂ ಪಿಚ್ ರಿಪೋರ್ಟ್​ ಏನು ಹೇಳುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಪಿಚ್​ ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಭಾರೀ ಅನುಕೂಲ ಆಗಿರಲಿದೆ ಎಂದು ಹೇಳಲಾಗುತ್ತಿದೆ.

ಪಿಚ್​​ ಮೇಲೆ ಬಿದ್ದ ಚೆಂಡು ಆರಂಭದಲ್ಲಿ ಸ್ವಿಂಗ್ ಆಗಬಹುದು. ಹಾಗಾಗಿ, ಯಾರೇ ಟಾಸ್​​ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲು ಉತ್ಸುಕರಾಗಿರುತ್ತಾರೆ ಎನ್ನಲಾಗುತ್ತಿದೆ. ಈಗ ಪಾಕ್​​ ವಿರುದ್ಧ ಆಸ್ಟ್ರೇಲಿಯಾ ಟಾಸ್​​ ಗೆದ್ದು ಬೌಲಿಂಗ್​​​ ಆಯ್ದುಕೊಂಡಿದೆ. ಹೀಗಾಗಿ ಪಾಕ್​ ವಿರುದ್ಧ ಆಸ್ಟ್ರೇಲಿಯಾನೇ ಗೆಲ್ಲೋ ಫೇವರೀಟ್​​ ತಂಡ.

News First Live Kannada


Leave a Reply

Your email address will not be published.