ಇಂದು ಫಿಲ್ಮ್​ ಚೇಂಬರ್ ಚುನಾವಣೆ; ಸಾ.ರಾ.ಗೋವಿಂದು, ಬಾ.ಮಾ.ಹರೀಶ್ ಮಧ್ಯೆ ಪ್ರಬಲ ಪೈಪೋಟಿ | Karnataka Film Chamber of Commerce election today May 28th close fight expected between Ba Ma Harish and Sa Ra GovinduKarnataka Film Chamber of Commerce Election: ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ಫಿಲ್ಮ್​ ಚೇಂಬರ್​ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ. 1700ಕ್ಕೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ.

TV9kannada Web Team


| Edited By: shivaprasad.hs

May 28, 2022 | 8:49 AM
ಬೆಂಗಳೂರು: ಇಂದು (ಮೇ.28) 64ನೇ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber) ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಸಾ.ರಾ.ಗೋವಿಂದು ಮತ್ತು ಬಾ.ಮಾ.ಹರೀಶ್ ನಡುವೆ ಪ್ರಬಲ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಬೆಳಿಗ್ಗೆ 10 ಘಂಟೆಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ನಂತರ ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ. 1700ಕ್ಕೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ. ಫಿಲ್ಮ್​​ಚೇಂಬರ್ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಎಲೆಕ್ಷನ್ ನಡೆಯಲಿದೆ. ಇಂದು ರಾತ್ರಿ ವೇಳೆಗೆ ಚುನಾವಣೆಯ ಫಲಿತಾಂಶ ಹೊರಬರಲಿದೆ.

TV9 Kannada


Leave a Reply

Your email address will not be published. Required fields are marked *