ಐಪಿಎಲ್​ನ ಬಯೋ ಸೆಕ್ಯೂರ್​ ಲಕ್ಷ್ಮಣ ರೇಖೆಯನ್ನೇ ದಾಟಿದ್ದ ಮಹಾಮಾರಿ, ಮೇ 3ರಂದು ಮಿಲಿಯನ್ ಡಾಲರ್​ ಟೂರ್ನಿಯ ಮೊದಲ ಪಂದ್ಯವನ್ನ ರದ್ದಾಗಿಸಿತ್ತು. ಕಿಲ್ಲರ್​ ಕೊರೊನಾಗೆ ಹೆದರಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ, 31 ಪಂದ್ಯಗಳನ್ನ ಅನಿರ್ಧಿಷ್ಟವಾಧಿಗೆ ಮುಂಡೂಡಿತ್ತು. ಇದರಿಂದಾಗಿ 14 ಸೀಸನ್​​ಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿತ್ತು.. ಬಳಿಕ ಕಲರ್​​ಫುಲ್ ಲೀಗ್ ಯಾವಾಗ ಮರು ಆಯೋಜನೆ ಆಗುತ್ತೆ..? ಎಲ್ಲಿ ಮತ್ತು ಹೇಗೆ ನಡೆಯುತ್ತೆಂಬುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುತೂಹಲಕ್ಕೆ ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆ ತೆರೆ ಎಳೆಯಲು ಮುಂದಾಗಿದೆ…

ಇಂದು ನಡೆಯಲಿದೆ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ
ಐಸಿಸಿ ಜೊತೆಗಿನ ಸಭೆಗೂ ಮುನ್ನ ಇಂದು ಸೌರವ್​ ಗಂಗೂಲಿ ನೇತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಐಪಿಎಲ್ ಚೇರ್​​ಮನ್ ಬ್ರಿಜೇಜ್ ಪಟೇಲ್, ಬಿಸಿಸಿಐ ಕಾರ್ಯಾಧ್ಯಕ್ಷ ಜಯ್​ ಶಾ ಸೇರಿದಂತೆ, ಹಲವು ಪ್ರಮುಖರು ವರ್ಚುವಲ್​​ ಮೂಲಕ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಐಪಿಎಲ್​ ಮರು ಆಯೋಜನೆ, ಟಿ20 ವಿಶ್ವಕಪ್ ಆತಿಥ್ಯ, ಸ್ಥಳಾಂತರ ಹಾಗೂ ಕೋವಿಡ್ ಸಂಕಷ್ಟದ ನಡುವೆ ದೇಶಿ ಟೂರ್ನಿಗಳ ಆಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕನ್ಫರ್ಮ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ ಹಾಗೂ ಟಿ20 ವಿಶ್ವಕಪ್ ಟೂರ್ನಿಯ ಸ್ಥಳಾಂತರ ವಿಚಾರಗಳೇ ಇಂದಿನ ಸಭೆಯ ಪ್ರಮುಖ ಆಜೆಂಡಾಗಳಾಗಿವೆ.

ಐಪಿಎಲ್, ಟಿ20 ವಿಶ್ವಕಪ್ ಬಗ್ಗೆ ಅಂತಿಮ ತೀರ್ಮಾನ
ಇಂದಿನ ಸಭೆಯ ಪ್ರಮುಖ ಅಜೆಂಡಾ, ಐಪಿಎಲ್ ಟೂರ್ನಿಯ ಮರು ಆಯೋಜನೆ ಹಾಗೂ ಅಕ್ಟೋಬರ್​ನಲ್ಲಿ ಭಾರತದ ಅತಿಥ್ಯದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಆಗಿದೆ. ಅದ್ರಲ್ಲೂ ಟಿ20 ವಿಶ್ವಕಪ್​​ಗೂ ಮುನ್ನ ಐಪಿಎಲ್ ಆಯೋಜನೆಯ ಬಗ್ಗೆ ಕಾರ್ಯತಂತ್ರ ರೂಪಿಸಿರುವ ಬಿಸಿಸಿಐ, ಸೆಪ್ಟಂಬರ್​ನಲ್ಲಿ ಐಪಿಎಲ್ ಮರು ಆಯೋಜನೆಗೆ ಉತ್ಸುಕತೆ ತೋರಿದೆ. ಅದ್ರಲ್ಲೂ ಟಿ20 ವಿಶ್ವಕಪ್​​ಗೂ ಒಂದು ವಾರದ ಮುನ್ನವೇ ಐಪಿಎಲ್ ಪೂರ್ಣಗೊಳಿಸುವ ಉದ್ದೇಶ ಹೊಂದಿರುವ ಬಿಸಿಸಿಐ, ಐಪಿಎಲ್ ಮರು ಆಯೋಜನೆ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದೆ. ಮುಖ್ಯವಾಗಿ ನಿರ್ದಿಷ್ಟ ಸಮಯದಲ್ಲಿ ಐಪಿಎಲ್ ಮುಗಿಸೋಕೆ ಪ್ಲಾನ್ ಮಾಡಿಕೊಳ್ತಿದೆ..

ಅಷ್ಟೇ ಅಲ್ಲ..! ಇದೇ ವೇಳೆ ಅಕ್ಟೋಬರ್​ನಲ್ಲಿ ಭಾರತದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆಯೂ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ. ಅದ್ರಲ್ಲೂ ಭಾರತದಲ್ಲಿ ದಿನೇದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗ್ತಿವೆ. ಹಾಗಾಗಿ ಟಿ20 ವಿಶ್ವಕಪ್​ ಟೂರ್ನಿಯನ್ನ ಯುಎಇಗೆ ಸ್ಥಳಾಂತರಿಸುವ ಬಗ್ಗೆಯೂ ತೀರ್ಮಾನಿಸಲಿದೆ. ಆದ್ರೆ ಯುಎಇ ಸ್ಥಳಾಂತರ ಕೇವಲ ಬಿಸಿಸಿಐನ ಆಯ್ಕೆಯಾಗಿ ಮಾತ್ರವೇ ಇರಲಿದೆ.

ಯುಎಇ ಮೇಲ್ಯಾಕೆ ಬಿಸಿಸಿಐ ಒಲವು..?
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್​, ಲಂಕಾ ಕ್ರಿಕೆಟ್ ಬೋರ್ಡ್​ಗಳು ಐಪಿಎಲ್ ಆಯೋಜನೆಯ ಆಫರ್​ ನೀಡಿದ್ದವು. ಆದ್ರೆ ವಿಶ್ವ ಶ್ರೀಂಮತ ಕ್ರಿಕೆಟ್ ಸಂಸ್ಥೆಯ ಒಲವು ಮಾತ್ರ ಯುಎಇ ಮೇಲಿದೆ.

ಯುಎಇ ಮೇಲ್ಯಾಕೆ ಒಲವು..?
* ಕೊರೊನಾ ನಡುವೆ 2020ರ ಐಪಿಎಲ್ ಟೂರ್ನಿಯ ಯಶಸ್ಸು
* ಭಾರತಕ್ಕಿಂತ ಯುಎಇ ಬಯೋಬಬಲ್ ಹೆಚ್ಚು ಸುರಕ್ಷತೆ
*​ ಇತರೆ ದೇಶಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಕಡಿಮೆ
* ಆಟಗಾರರ ಪ್ರಯಾಣದ ಜೊತೆ ವಸ್ತುಗಳ ಸಾಗಾಣಿಕೆಯೂ ಸುಲಭ
* ಐಪಿಎಲ್ ಆಯೋಜನೆಯ ಅನುಭವ, ಕೊರೊನಾ ನಿಯಂತ್ರಣ

ಯುಎಇ ಬಯೋ ಬಬಲ್ ಸೆಕ್ಯೂರ್ ಉತ್ತಮವಾಗಿತ್ತು ಅಂತ ಆಟಗಾರರೇ ತಿಳಿಸಿದ್ದಾರೆ. ಐಪಿಎಲ್​​ ತೊರೆದಿದ್ದಾಗ ಆರ್​ಸಿಬಿ ಸ್ಪಿನ್ನರ್​ ಆ್ಯಂಡಂ ಜಂಪಾನೇ ಈ ಬಗ್ಗೆ ತುಟಿಬಿಚ್ಚಿದ್ದರು. ಅಷ್ಟೇ ಯಾಕೆ.. ಸ್ವತಃ ಟೀಮ್ ಇಂಡಿಯಾದ ಆಟಗಾರ ವೃದ್ದಿಮಾನ್ ಸಾಹ ಕೂಡ, ಭಾರತದಲ್ಲಿ ಆಯೋಜಿಸಿದ್ದ ಐಪಿಎಲ್, ಯುಎಇನಂತೆ ಇರಲಿಲ್ಲ ಅಂತ ಅಪಸ್ವರ ಎತ್ತಿದ್ದರು…

‘ಯುಎಇನಂತೆ ಇಲ್ಲಿರಲಿಲ್ಲ’
‘ಬಯೋಬಬಲ್ ಸುರಕ್ಷೆ ಕಡೆ ಗಮನ ಹರಿಸೋದು ಆಯೋಜಕರ ಜವಾಬ್ದಾರಿ. ನಾನು ಒಂದು ವಿಚಾರ ಹೇಳ್ತೇನೆ, ಕಳೆದ ವರ್ಷ ಯುಎಇಯಲ್ಲಿ ಐಪಿಎಲ್ ನಡೆದಿದ್ದಾಗ ಒಬ್ಬೇ ಒಬ್ಬ ಆಟಗಾರ, ಸಿಬ್ಬಂದಿಗೆ ಸೋಂಕು ತಗುಲಿರಲಿಲ್ಲ. ಆದ್ರೆ, ಇಲ್ಲಿ ತಗುಲಿದೆ. ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’
ವೃದ್ಧಿಮಾನ್​ ಸಾಹ, ಕ್ರಿಕೆಟಿಗ

ಸ್ವತಃ ಸಾಹ ಹೇಳಿದಂತೆ ದುಬೈ ಟಿ20 ವಿಶ್ವಕಪ್ ಹಾಗೂ ಐಪಿಎಲ್ ಆಯೋಜನೆಗೆ ಸುರಕ್ಷಿತ ಸ್ಥಳ.. ಯಾಕಂದ್ರೆ ಭಾರತಕ್ಕೆ ಹೋಲಿಸಿದ್ರೆ, ಯುಎಇನಲ್ಲಿ ಕೊರೊನಾ ತಡೆಗಟ್ಟಲು ಕಠಿಣ ಕ್ರಮಗಳನ್ನೇ ತೆಗೆದುಕೊಂಡಿದ್ದಾರೆ. ಅದ್ರಲ್ಲೂ ವಿದೇಶಿಗರ ಆಗಮನದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಿರುವ ಸ್ಥಳಿಯ ಸರ್ಕಾರ, ಪ್ರವಾಸಿಗರು ವ್ಯಾಕ್ಸಿನೇಷನ್ ಪಡೆದವರ ಆಗಮನಕ್ಕೆ ಮಾತ್ರವೇ ಅವಕಾಶ ನೀಡುತ್ತೆ. ಹಾಗಾಗಿಯೇ ಬಿಸಿಸಿಐ ಬಿಗ್​​ಬಾಸ್​ಗಳು, ದುಬೈನಲ್ಲಿ ನಡೆಸೋಕೆ ಹೆಚ್ಚು ಉತ್ಸುಕ ತೋರುತ್ತಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೂಡ ಹೊರಬೀಳಲಿದೆ..

ಇಷ್ಟೇ ಅಲ್ಲ..! ಕೊರೊನಾ ಸಂಕಷ್ಟದಲ್ಲಿ ದೇಶಿ ಕ್ರಿಕೆಟ್ ಆಯೋಜನೆ ಕುರಿತೂ ಕೂಡ ಬಿಸಿಸಿಐ, ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ. ಜೊತೆಗೆ ದೇಶಿ ಕ್ರಿಕೆಟಿಗರಿಗೆ ಸಂದಾಯವಾಗಬೇಕಿರೋ ವೇತನ ಜೊತೆಗೆ ಮತ್ತಷ್ಟು ಅರ್ಥಿಕ ವಿಚಾರಗಳ ಬಗ್ಗೆಯೂ ಈ ವೇಳೆ ತೀರ್ಮಾನಿಸಲಿದೆ. ಒಟ್ನಲ್ಲಿ 2ನೇ ಹಂತದ ಐಪಿಎಲ್ ಆಯೋಜನೆ ನಿರ್ಧಾರ ಇಂದೇ ಹೊರಬೀಳಲಿದ್ದು, ಟಿ20 ವಿಶ್ವಕಪ್ ಸ್ಥಳಾಂತರದ ಅಂತಿಮ ನಿರ್ಧಾರ ಮಾತ್ರ ಒಂದಷ್ಟು ದಿನ ಕಾಯಬೇಕಿರೋದು ಕನ್ಫರ್ಮ್…

The post ಇಂದು ಬಿಸಿಸಿಐ ಪ್ರಕಟಿಸುತ್ತಾ ಐಪಿಎಲ್ Phase-2 ವೇಳಾಪಟ್ಟಿ​..? appeared first on News First Kannada.

Source: newsfirstlive.com

Source link