ಬೆಳಗಾವಿ: ಇಂದು ಬೆಳಗಾವಿ ಲೋಕಸಭಾ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಮತಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಉಪಚುನಾವಣೆ ಫಲಿತಾಂಶ ಇತಿಹಾಸ ಬರೆಯಲಿದೆ. ಯಾಕಂದ್ರೆ ಬಿಜೆಪಿ-ಕಾಂಗ್ರೆಸ್ ಇಬ್ಬರಲ್ಲಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ.

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆದ್ದರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹಾಗೇ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಗೆದ್ದರೆ, ಸಂಸತ್ ಪ್ರವೇಶಿಸಿದ ಎಸ್ಟಿ ಸಮುದಾಯದ ನಾಯಕ ಎನ್ನುವ ಇತಿಹಾಸ ಸೃಷ್ಟಿಯಾಗಲಿದೆ. ಅಲ್ಲದೆ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ ಜಾರಕಿಹೊಳಿ ಕುಟುಂಬದ ಮೊದಲ ಸದಸ್ಯ ಎಂಬ ಹೆಗ್ಗಳಿಕೆಗೂ ಭಾಜನರಾಗಲಿದ್ದಾರೆ. ಇಂದಿನ ಫಳಿತಾಂಶ ಭಾರೀ ಕುತೂಹಲ ಮೂಡಿಸಿದೆ.

ಬಿಜೆಪಿ ಅಭ್ಯರ್ಥಿ ಪರಿಚಯ
-ಮಂಗಳಾ ಸುರೇಶ್ ಅಂಗಡಿ
– ಪ್ರಬಲ‌ ಲಿಂಗಾಯತ ಸಮುದಾಯಕ್ಕೆ ಸೇರಿದವರು
-ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಅವರ ಪತ್ನಿ
-ಹುಟ್ಟೂರು ಗೋಕಾಕ್ ತಾಲೂಕಿನ ಕೌಜಲಗಿ, ಬಿಎಸ್ಸಿ ಪದವೀಧರೆ
-ಸದ್ಯ ಸುರೇಶ್ ಅಂಗಡಿ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷೆ
-ದಿ.ಸುರೇಶ್ ಅಂಗಡಿ ಅಕಾಲಿಕ ನಿಧನದ ನಂತರ ಅನಿವಾರ್ಯವಾಗಿ ರಾಜಕೀಯ ಎಂಟ್ರಿ
– ಮಗಳು ಶ್ರದ್ಧಾಗೆ ಟಿಕೆಟ್ಗೆ ಮನವಿ ಮಾಡಿದ್ದಾಗ ಬಿಜೆಪಿ ಹೈಕಮಾಂಡ್ ಮಂಗಳಾ ಅಂಗಡಿಗೆ ಟಿಕೇಟ್ ನೀಡಿತ್ತು
– ಮೊದಲ ಬಾರಿ ಬೆಳಗಾವಿ ಲೋಕಸಭಾ ಉಪ ಚುನಾವಣೆ ಎದುರಿಸಿದ್ದಾರೆ.
– ಪ್ರಚಾರ ಸಂದರ್ಭದಲ್ಲಿ ಗಂಡನ ನೆನೆದು ಕಣ್ಣೀರು
– ಮಂಗಳಾ ಅಂಗಡಿಗೆ ದೊಡ್ಡ ಅಸ್ತ್ರ ಅಂದ್ರೆ ಅದು ಅನುಕಂಪ ಮತ್ತು ಪ್ರಮುಖ ಲಿಂಗಾಯತ ಸಮುದಾಯದವರೆಂಬ ಅಂಶ

ಕಾಂಗ್ರೆಸ್ ಅಭ್ಯರ್ಥಿ ಪರಿಚಯ
-ಸತೀಶ್ ಲಕ್ಷ್ಮಣ ರಾವ್ ಜಾರಕಿಹೊಳಿ‌
– ಗೋಕಾಕನ ಪ್ರಭಾವಿ ಜಾರಕಿಹೊಳಿ ಕುಟುಂಬದ ಸದಸ್ಯ
– ಹುಟ್ಟಿದ್ದು 1-6-1962 ರಲ್ಲಿ, ಓದಿದ್ದು- PUC
– ನಾಯಕ ಸ್ಟೂಡೆಂಟ್ ಫೆಡರೇಶನ್ ಚೇರ್ಮನ್ ಆಗಿ ಸಮಾಜ ಸೇವೆ ಆರಂಭ
-1997- 2013ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಪ್ರವೇಶ
-1992-1994ರಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ
-ಹಾಲಿ ಸತೀಶ್ ಶುಗರ್ ಲಿಮಿಟೆಡ್ ನ ಚೇರಮನ್ ಆಗಿದ್ದಾರೆ
-2004ರಲ್ಲಿ ಮೊದಲ ಬಾರಿಗೆ ಜವಳಿ ಸಚಿವರಾಗಿ ಅಧಿಕಾರ
-2008, 2013, 2018ರಲ್ಲಿ ಮೂರು ಬಾರಿ ಯಮಕನಮರಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
– ಜವಳಿ, ಅಬಕಾರಿ, ಸಣ್ಣ ಕೈಗಾರಿಕಾ,ಅರಣ್ಯ ಖಾತೆ ಸಚಿವರಾಗಿ ಕಾರ್ಯ
-ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ
-2017ರಲ್ಲಿ ತೆಲಂಗಾಣ ರಾಜ್ಯದ ಎಐಸಿಸಿ ಕಾರ್ಯದರ್ಶಿ ಉಸ್ತುವಾರಿ ಕೆಲಸ
-2-7-2020ರಿಂದ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಅಧಿಕಾರ ಸ್ವೀಕಾರ
-ಜಾರಕಿಹೋಳಿ ಕುಟುಂಬದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ ಪ್ರಥಮ ಸದಸ್ಯ ಸತೀಶ್ ಜಾರಕಿಹೋಳಿ
-ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಅಪ್ಪಟ ಶಿಷ್ಯ
-ಅಹಿಂದ ನಾಯಕ, ಮೂಢನಂಬಿಕೆ ವಿರುದ್ಧ ಮಾನವ ಬಂಧುತ್ವ ವೇದಿಕೆ ಮೂಲಕ ಹೋರಾಟ, ಪ್ರಭಾವಿ ನಾಯಕ
-ಈ ಲೋಕಸಭಾ ಚುನಾವಣೆಯಲ್ಲಿ ಅನುಕಂಪಕ್ಕಿಂತ ಅಭಿವೃದ್ಧಿಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದರು.

The post ಇಂದು ಬೆಳಗಾವಿ ಬೈಎಲೆಕ್ಷನ್ ಫಲಿತಾಂಶ: ಇಬ್ಬರಲ್ಲಿ ಯಾರೇ ಗೆದ್ದರೂ ಇತಿಹಾಸ appeared first on News First Kannada.

Source: newsfirstlive.com

Source link