ನವದೆಹಲಿ: ಸಿಎಂ ಬದಲಾವಣೆ ವದಂತಿ ಸುದ್ದಿಯ ನಡುವೆ ಇಂದು ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ದಿಢೀರ್ ದೆಹಲಿಗೆ ಆಗಮಿಸಿದ್ದಾರೆ.

ತನ್ನ ಆಪ್ತರೊಂದಿಗೆ ಇಂದು ಬೆಳಗ್ಗೆ 5:30ರ ವಿಮಾನದಲ್ಲಿ ವಿಜಯೇಂದ್ರ ದೆಹಲಿಗೆ ಆಗಮಿಸಿದ್ದು ಕುತೂಹಲ ಮೂಡಿಸಿದೆ. ದೇಶದಲ್ಲಿ ಕೋವಿಡ್ 19 ಇರುವ ರಾಜ್ಯಗಳಿಗೆ ಹೈಕಮಾಂಡ್ ನಾಯಕರು ಕೊರೊನಾ ನಿಯಂತ್ರಣದತ್ತ ಜಾಸ್ತಿ ಗಮನ ಹರಿಸಿ ಎಂದು ಸೂಚಿಸಿರುವಾಗ ವಿಜಯೇಂದ್ರ ದೆಹಲಿಗೆ ಆಗಮಿಸಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.

ಬಸನ ಗೌಡ ಪಾಟೀಲ್ ಅವರು ಈ ಹಿಂದೆಯೇ ನಾಯಕತ್ವ ಬದಲಾಗುತ್ತದೆ ಎಂದು ಹೇಳುತ್ತಾ ಬಂದಿದ್ದರು. ಉತ್ತರಾಖಂಡದಲ್ಲಿ ಸಿಎಂ ಬದಲಾವಣೆಯ ಬಳಿಕ ಪಂಜರಾಜ್ಯಗಳ ಚುನಾವಣೆಯ ಬಳಿಕ ಕರ್ನಾಟಕದಲ್ಲೂ ಸಿಎಂ ಬದಲಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

ಬಸನ ಗೌಡ ಪಾಟೀಲ್ ಅವರ ಬಂಡಾಯದ ಬಳಿಕ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಸಹ ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿಯ ಉಳಿದ ನಾಯಕರು ಯೋಗೇಶ್ವರ್ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಗೆ 2023 ದೂರದೃಷ್ಟಿ- ಯಡಿಯೂರಪ್ಪ ಉತ್ತರಾಧಿಕಾರಿ ಹುಡುಕಾಟ

ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು. ಅವರನ್ನು ಬದಲಾಯಿಸಿದರೆ ಆ ಸ್ಥಾನವನ್ನು ತುಂಬುವ ವ್ಯಕ್ತಿ ಯಾರು ಇಲ್ಲ. ನಾಯಕತ್ವ ಬದಲಾವಣೆ ವಿಚಾರ ಸುಳ್ಳು ಎಂದು ಮೂಡಿಗೆರೆಯ ಶಾಸಕ ಕುಮಾರಸ್ವಾಮಿ ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಕೀಯದಲ್ಲಿ ಕೆಲವೊಮ್ಮೆ ಬೆಂಕಿ ಇಲ್ಲದೇ ಹೊಗೆ ಆಡುತ್ತದೆ. ಆಧಾರ ಇಲ್ಲದ ಸುದ್ದಿಗಳು ಬರುತ್ತದೆ ಎಂದು ಹೇಳಿ ನಾಯಕತ್ವ ಬದಲಾವಣೆ ಸುದ್ದಿ ವಿಚಾರವನ್ನು ಅಲ್ಲಗೆಳೆದಿದ್ದರು. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

ಬಿಜೆಪಿ ನಾಯಕರ ಹೇಳಿಕೆಯಿಂದ ಕಳೆದ ವಾರ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಜೋರಾಗಿ ನಡೆದು ತಣ್ಣಗಾಗಿತ್ತು. ಈ ಚರ್ಚೆಗಳ ನಡುವೆ ಇಂದು ದಿಢೀರ್ ವಿಜಯೇಂದ್ರ ಅವರು ದೆಹಲಿಗೆ ಹೋಗಿದ್ದು ಈಗ ಯಾಕೆ ಎಂಬ ಕುತೂಹಲ ಮೂಡಿದೆ.

The post ಇಂದು ಬೆಳಗ್ಗೆ ದೆಹಲಿಗೆ ವಿಜಯೇಂದ್ರ ದಿಢೀರ್ ಆಗಮನ appeared first on Public TV.

Source: publictv.in

Source link