ರಜಿನಿಕಾಂತ್ ಅಭಿನಯದ ಬಹು ನಿರೀಕ್ಷಿತ ಅಣ್ಣಾತ್ತೆ ಸಿನಿಮಾ ಇಂದು ಬಿಡುಗಡೆಗೊಂಡಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ದಿವಂಗತ ಡಾ.ಎಸ್ಪಿ ಬಾಲಸುಬ್ರಮಣ್ಯಂ ಹಾಡಿರುವ ‘ಅಣ್ಣಾತ್ತೆ.. ಅಣ್ಣಾತ್ತೆ..’ ಹಾಡು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೇ ಸ್ವರ ಮಾಂತ್ರಿಕ ಎಸ್ಪಿಬಿ ಅವರ ಗೌರವವನ್ನೂ ಮತ್ತಷ್ಟು ಹೆಚ್ಚಿಸುತ್ತಿದೆ.
ಇಂದು ಕನ್ನಿಂಗ್ ಹ್ಯಾಂ ರಸ್ತೆಯ ಫನ್ ಸಿನಿಮಾಸ್ನಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಸಿನಿ ಪ್ರೇಕ್ಷಕರು ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸದರು. ರಜನಿಕಾಂತ್ ಎಂಟ್ರಿ ಆದ ಬಳಿಕ ಬರುವ ಈ Introduction Songಗೆ ಎಲ್ಲರೂ ಎದ್ದು ನಿಂತು ಅಭಿನಂದನೆ ಸಲ್ಲಿಸಿದರು.
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಇದಾಗಿದೆ. ಆ ಹಾಡು ತೆರೆಯ ಮೇಲೆ ಮೂಡಿ ಬರುವಾಗ ಥಿಯೇಟರ್ನಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಡಾ.ಎಸ್ಪಿಬಿಗೆ ಅಭಿನಂದನೆ ಸಲ್ಲಿಸಿದರು.