ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಳೆದ ಹಲವು ದಿನಗಳಿಂದ ಸೃಷ್ಟಿಯಾಗಿರೋ ಬಂಡಾಯ, ಗೊಂದಲ, ವೈಮನಸ್ಸುಗಳಿಗೆ ಶೀಘ್ರವೇ ತಿಲಾಂಜಲಿ ಬೀಳುವ ಕಾಲ ಸನಿಹದಲ್ಲಿದೆ. ನಾಯಕತ್ವ ಬದಲಾವಣೆ, ಪರ-ವಿರೋಧ ಚಟುವಟಿಕೆಗಳನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಇಂದು ರಾಜ್ಯಕ್ಕೆ ಆಗಮಿಸ್ತಿದ್ದಾರೆ.

ಮೂರು ದಿನ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಎಲ್ಲರೊಡನೆ ಸಮಾಲೋಚನೆ ನಡೆಸಿ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸುವ ಕಸರತ್ತು ನಡೆಸಲಿದ್ದಾರೆ. ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿ ಬಿಕ್ಕಟ್ಟಿಗೆ ಪರಿಹಾರ ಸೂತ್ರವನ್ನು ಕಂಡುಕೊಳ್ಳಲು ಎಲ್ಲರ ಅಭಿಪ್ರಾಯ ಆಲಿಸಲಿದ್ದಾರೆ.

The post ಇಂದು ರಾಜ್ಯಕ್ಕೆ ಅರುಣ್​ಸಿಂಗ್: ತಾರ್ಕಿಕ ಅಂತ್ಯ ಕಾಣುತ್ತಾ ನಾಯಕತ್ವ ಚರ್ಚೆ? appeared first on News First Kannada.

Source: newsfirstlive.com

Source link