ಬೆಂಗಳೂರು: ಇಂದು ರಾಜ್ಯದಲ್ಲಿ 1,913 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 48 ಮಂದಿ ಸಾವನ್ನಪ್ಪಿದ್ದಾರೆ. ಇವತ್ತು 2,489 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.53ಕ್ಕಿಳಿದಿದ್ದು, ಮರಣ ಪ್ರಮಾಣ ಸಹ ಶೇ.2.50ಕ್ಕೆ ಇಳಿದಿದೆ. ರಾಜ್ಯದಲ್ಲಿ ಸದ್ಯ 24,234 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 28,74,597 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು 35,944 ಜನರು ಸಾವನ್ನಪ್ಪಿದ್ದಾರೆ.

ಇಂದು ಒಟ್ಟು 1,24,954 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜಧಾನಿಯಲ್ಲಿ 500ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದು, 401 ಜನಕ್ಕೆ ಸೋಂಕು ತಗುಲಿದೆ. ಸದ್ಯ ಬೆಂಗಳೂರಿನಲ್ಲಿ 12,671 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 17, ಬೆಳಗಾವಿ 44, ಬೆಂಗಳೂರು ಗ್ರಾಮಾಂತರ 24, ಬೆಂಗಳೂರು ನಗರ 401, ಬೀದರ್ 2, ಚಾಮರಾಜನಗರ 29, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 89, ಚಿತ್ರದುರ್ಗ 30, ದಕ್ಷಿಣ ಕನ್ನಡ 222, ದಾವಣಗೆರೆ 36, ಧಾರವಾಡ 9, ಗದಗ 16, ಹಾಸನ 191, ಹಾವೇರಿ 8, ಕಲಬುರಗಿ 2, ಕೊಡಗು 46, ಕೋಲಾರ 74, ಕೊಪ್ಪಳ 3, ಮಂಡ್ಯ 68, ಮೈಸೂರು 198, ರಾಯಚೂರು 3, ರಾಮನಗರ 18, ಶಿವಮೊಗ್ಗ 55, ತುಮಕೂರು 170, ಉಡುಪಿ 95, ಉತ್ತರ ಕನ್ನಡ 42, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

The post ಇಂದು ರಾಜ್ಯದಲ್ಲಿ 1,913 ಜನಕ್ಕೆ ಕೊರೊನಾ ಸೋಂಕು, 48 ಸಾವು appeared first on Public TV.

Source: publictv.in

Source link