ಇಂದು ರಾಣಿ ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ : ಆಡಳಿತ ಚತುರೆ ಅಹಲ್ಯಾಬಾಯಿ ಹೋಳ್ಕರ್ | Today is Queen Ahilyabai Holkar’s birthday


ಇಂದು ರಾಣಿ ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ :  ಆಡಳಿತ ಚತುರೆ ಅಹಲ್ಯಾಬಾಯಿ ಹೋಳ್ಕರ್

ಅಹಲ್ಯಾ ಬಾಯಿ ಹೋಳ್ಕರ

1754 ರಲ್ಲಿ ಕುಂಭೇರ್ ಯುದ್ಧದಲ್ಲಿ ಖಂಡೆರಾವ್ ಹತನಾದದ್ದರಿಂದ ಆಕೆ ಕೇವಲ 29 ನೇ ವಯಸ್ಸಿನಲ್ಲಿ ವಿಧವೆಯಾಗಬೇಕಾಯಿತು. ಅಹಲ್ಯಾಬಾಯಿ ಸತಿಸಹಗಮನ ಪದ್ಧತಿಗೆ ಬಳಿಯಾಗಬೇಕಾದ ಸಂದರ್ಭದಲ್ಲಿ ಅವಳ ಮಾವ ಮಲ್ಹರ್ ರಾವ್ ಅವಳನ್ನು ರಕ್ಷಿಸಿದರು. ಆ ಸಮಯದಲ್ಲಿ ಅವನು ಅವಳ ಆಧಾರಸ್ತಂಭವಾಗಿದ್ದನು.

ಭಾರತದ ಇತಿಹಾಸದಲ್ಲಿ ಅದೆಷ್ಟೋ ರಾಣಿಯರು ಬಂದು ಹೋಗಿದ್ದಾರೆ. ಆದರೆ ಕೆಲವೊಂದು ಹೆಸರುಗಳು ಇಂದಿಗೂ ಜೀವಂತವಾಗಿವೆ ಅಂತವುಗಳಲ್ಲಿ ಮುಖ್ಯವಾದ ಹೆಸರು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್. ಅಹಮದ್‌ನಗರದ ಜಮಖೇಡ್‌ನ ಚೋಂಡಿ ಗ್ರಾಮದಲ್ಲಿ ಜನಿಸಿದ ಮಹಾರಾಣಿ ಅಹಲ್ಯಾಬಾಯಿ ಅವರ ತಂದೆ ಮಂಕೋಜಿ ರಾವ್ ಶಿಂಧೆ. ಹಳ್ಳಿಯಲ್ಲಿ ಮಹಿಳಾ ಶಿಕ್ಷಣವು ದೂರದ ಮಾತುಗಳಾಗಿದ್ದ ಕಾಲದಲ್ಲಿ ಮಂಕೋಜಿ ರಾವ್ ಮಗಳಿಗೆ ಮನೆಯಲ್ಲಿಯೇ ಓದಲು ಮತ್ತು ಬರೆಯಲು ಕಲಿಸಿದರು. ಅಹಲ್ಯಾ ರಾಜವಂಶದಿಂದ ಬಂದವಳಲ್ಲದಿದ್ದರೂ, ಹೆಚ್ಚಿನವರು ಅವಳ ಇತಿಹಾಸದ ಪ್ರವೇಶವನ್ನು ಅದೃಷ್ಟದ ತಿರುವು ಎಂದು ಪರಿಗಣಿಸುತ್ತಾರೆ. ಮಾಳ್ವಾ ಪ್ರಾಂತ್ಯದ ಮಹಾರಾಜ ಮಲ್ಹಾರ್ ರಾವ್ ಹೋಳ್ಕರ್, ಪುಣೆಗೆ ಪ್ರಯಾಣಿಸುವಾಗ ಚೌಂಡಿಯಲ್ಲಿನ ದೇವಾಲಯದಲ್ಲಿ ಬಡವರಿಗೆ ಊಟ ನೀಡುತ್ತಿರುವ ಅಹಲ್ಯಾಬಾಯಿಯನ್ನು ಗುರುತಿಸಿದರು. ಬಾಲಕಿಯ ಸೇವೆ ಮತ್ತು ಕರುಣಾಗುಣಗಳಿಗೆ ಪ್ರೇರಿತನಾದ ಅವನು ತನ್ನ ಮಗ ಖಂಡೇರಾವ್ ಹೋಳ್ಕರ್‌ಗೆ 1733 ರಲ್ಲಿ ವಿವಾಹ ಮಾಡಿಸಿದನು. ಆಗ ಅವಳ ವಯಸ್ಸು ಕೇವಲ 8 ವರ್ಷ.

1754 ರಲ್ಲಿ ಕುಂಭೇರ್ ಯುದ್ಧದಲ್ಲಿ ಖಂಡೆರಾವ್ ಹತನಾದದ್ದರಿಂದ ಆಕೆ ಕೇವಲ 29 ನೇ ವಯಸ್ಸಿನಲ್ಲಿ ವಿಧವೆಯಾಗಬೇಕಾಯಿತು. ಅಹಲ್ಯಾಬಾಯಿ ಸತಿಸಹಗಮನ ಪದ್ಧತಿಗೆ ಬಳಿಯಾಗಬೇಕಾದ ಸಂದರ್ಭದಲ್ಲಿ ಅವಳ ಮಾವ ಮಲ್ಹರ್ ರಾವ್ ಅವಳನ್ನು ರಕ್ಷಿಸಿದರು. ಆ ಸಮಯದಲ್ಲಿ ಅವನು ಅವಳ ಆಧಾರಸ್ತಂಭವಾಗಿದ್ದನು. ಆದರೆ 12 ವರ್ಷಗಳ ನಂತರ 1766 ರಲ್ಲಿ ತನ್ನ ಮಾವ ತೀರಿಕೊಂಡ ನಂತರ ರಾಜ್ಯವು ಅವನತಿಯ ಪಥದತ್ತ ಹೋಗುತ್ತಿರುವುದಕ್ಕೆ ಅಹಲ್ಯಬಾಯಿ ಸಾಕ್ಷಿಯಾದಳು.

ಮುಂದೆ ಅಹಲ್ಯಾಬಾಯಿಯ ಏಕೈಕ ಮಗ ಮಾಲೆ ರಾವ್ ಹೋಳ್ಕರ್ ಅವರು ಸಿಂಹಾಸನವನ್ನೇರಿದರು. 5 ಏಪ್ರಿಲ್ 1767 ರಂದು ಯುವ ದೊರೆ ಮಾಲೆ ರಾವ್ ತೀರಿಕೊಂಡಾಗ ರಾಜ್ಯದ ಕೊನೆಯ ಆಸರೆಯೂ ಕಳಚಿದಂತಾಯಿತು.ಒಬ್ಬ ಮಹಿಳೆ ತನ್ನ ಗಂಡ, ಮಾವ ಮತ್ತು ಒಬ್ಬನೇ ಮಗನನ್ನು ಕಳೆದುಕೊಂಡ ನಂತರ ಹೇಗಿರಬಹುದು ಎಂಬ ಊಹೆ ನಮಗಿರಬಹುದು . ಆದರೆ ಅಹಲ್ಯಾಬಾಯಿ ಎದೆಗುಂದದೆ ಗಟ್ಟಿಯಾಗಿ ನಿಂತಳು. ತನ್ನ ದುಃಖವು ಸಾಮ್ರಾಜ್ಯದ ಆಡಳಿತ ಮತ್ತು ಜನರ ಜೀವನದ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ.

ತನ್ನ ಮಗನ ಮರಣದ ನಂತರ ಪೇಶ್ವೆಯವರಿಗೆ ವಹಿಸಿದ್ದಆಡಳಿತವನ್ನು ಮರಳಿ ಪಡೆದು . 1767 ರಲ್ಲಿ ಇಂದೋರ್‌ನ ಸಿಂಹಾಸನವೆರಿ ಮಹಾರಾಣಿಯಾದಳು.ತನ್ನ ಆಳ್ವಿಕೆಯ ಪ್ರಥಮ ವರ್ಷದಲ್ಲಿಯೇ ಧೈರ್ಯಶಾಲಿ ಹೋಲ್ಕರ್ ರಾಣಿಯು ತನ್ನ ರಾಜ್ಯವನ್ನು ರಕ್ಷಣೆಗಾಗಿ ವೀರಾಗ್ರಣಿಯಂತೆ ನಿಂತಳು. ಹೋಳ್ಕರ್ ಸೈನ್ಯದ ನಾಯಕಿಯಾಗಿ ಯುದ್ಧಭೂಮಿಯಲ್ಲಿ ಹೋರಾಡಿದಳು.

ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಮಾಳ್ವದ ಮಹಾರಾಣಿಯಾಗಿ ತನ್ನ ನೆಚ್ಚಿನ ಆನೆಯ ಮೇಲೆ ಕುಳಿತು ಬಿಲ್ಲನ್ನು ಕೈಗೆತ್ತಿಕೊಂಡು ಬತ್ತಳಿಕೆಯಲ್ಲಿರುವ ಬಾಣದಿಂದ ಶತ್ರುಗಳ ರುಂಡ ಚೆಂಡಾಡಿದಳು. ಅಹಲ್ಯಬಾಯಿ ಓರ್ವ ಕೆಚ್ಚೆದೆಯ ರಾಣಿ ಮತ್ತು ಉತ್ತಮ ಆಡಳಿತಗಾರ್ತಿ ಮಾತ್ರವಲ್ಲದೆ ಪ್ರಬುದ್ಧ ರಾಜಕಾರಣಿಯೂ ಆಗಿದ್ದಳು. ಮರಾಠಾ ಪೇಶ್ವೆಗಳು ಬ್ರೀಟಿಷರೊಂದಿಗೆ ಕೈಜೋಡಿಸಿರುವುದನ್ನು ತೀಕ್ಷ್ಣವಾಗಿ ಅಧ್ಯಯನ ಮಾಡಿದಳು. 1772 ರಲ್ಲಿ ಪೇಶ್ವೆಗೆ ಬರೆದ ಪತ್ರದಲ್ಲಿ ಬ್ರಿಟಿಷರೊಂದಿಗಿನ ಅವರ ಸಂಬಂಧದ ಬಗ್ಗೆ ಎಚ್ಚರಿಸಿದಳು. “ಹುಲಿಯಂತಹ ಇತರ ಮೃಗಗಳನ್ನು ಶಕ್ತಿಯಿಂದ ಅಥವಾ ಕುತಂತ್ರದಿಂದ ಕೊಲ್ಲಬಹುದು, ಆದರೆ ಕರಡಿಯನ್ನು ಕೊಲ್ಲುವುದು ತುಂಬಾ ಕಷ್ಟ. ನೀವು ಅದನ್ನು ನೇರವಾಗಿ ಮುಖಾಮುಖಿಯಾಗಿ ಕೊಂದರೆ ಮಾತ್ರ ಅದು ಸಾಯುತ್ತದೆ, ಇಲ್ಲದಿದ್ದರೆ ನಾವದರ ಹಿಡಿತಕ್ಕೆ ಸಿಲುಕಿದರೆ ಕಚಗುಳಿ ಇಟ್ಟು ಕೊಲ್ಲುತ್ತದೆ . ಇಂಗ್ಲಿಷರ ದಾರಿಯೇ ಹಾಗೆ, ನಾವು ಅದಕ್ಕೆ ಮರುಳಾದರೆ ಅವರ ಮೇಲೆ ಜಯಗಳಿಸುವುದು ಕಷ್ಟ.”

ಇಂದೋರ್ ತನ್ನ 30 ವರ್ಷಗಳ ಆಳ್ವಿಕೆಯಲ್ಲಿ ಅಭಿವೃದ್ಧಿ ಹೊಂದಿತು. ಮಾಲ್ವಾದಲ್ಲಿ ಹಲವಾರು ಕೋಟೆಗಳು ಮತ್ತು ರಸ್ತೆಗಳನ್ನು ನಿರ್ಮಿಸಿದ್ದಕ್ಕಾಗಿ, ಹಬ್ಬಗಳನ್ನು ಪ್ರಾಯೋಜಿಸುವುದರ ಮೂಲಕ ಮತ್ತು ಅನೇಕ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡುವ ಮೂಲಕ ಅವರು ಪ್ರಸಿದ್ಧರಾಗಿದ್ದರು.
ಹೋಳ್ಕರ್ ರಾಣಿಯು ಕಾಶಿ, ಗಯಾ, ಸೋಮನಾಥ, ಅಯೋಧ್ಯೆ, ಮಥುರಾ, ಹರಿದ್ವಾರ, ಕಂಚಿ, ಅವಂತಿ, ದ್ವಾರಕಾ, ಬದರಿನಾರಾಯಣ, ರಾಮೇಶ್ವರ ಮತ್ತು ಜಗನಾಥಪುರಿ ​​ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳು ವೈಭಯುತವಾಗಿ ಇರುವಂತೆ ಮಾಡಿದಳು.

ಮಹೇಶ್ವರದಲ್ಲಿ ಅವಳ ರಾಜಧಾನಿ ಸಾಹಿತ್ಯ, ಸಂಗೀತ, ಕಲಾತ್ಮಕ ಮತ್ತು ಕೈಗಾರಿಕಾ ಸಾಧನೆಗಳ ಸಮ್ಮಿಲನವಾಗಿತ್ತು. ಮರಾಠಿ ಕವಿ ಮೊರೊಪಂತ್, ಶಾಹಿರ್ ಅನಂತಪಾಂಡಿ ಮತ್ತು ಸಂಸ್ಕೃತ ವಿದ್ವಾಂಸರಾದ ಖುಶಾಲಿ ರಾಮ್ ಅವರಂತಹ ದಿಗ್ಗಜರಿಗೆ ಅವಳು ತನ್ನ ರಾಜಧಾನಿಯ ಬಾಗಿಲು ತೆರೆದಳು.
ಪ್ರಜೆಗಳ ಕಷ್ಟ ಕಾರ್ಪಣ್ಯಗಳಿಗೆ ಕಿವಿಯಾಗಿದ್ದ ಅಹಲ್ಯಬಾಯಿ ಜನಮನದ ರಾಣಿಯು ಆಗಿದ್ದಳು. ಆಕೆಯ ದೀರ್ಘಾಯುಷ್ಯಕ್ಕಾಗಿ ಜನ ಜಾತಿ ಮತ ಧರ್ಮ ರಹಿತವಾಗಿ ಪ್ರಾರ್ಥಿಸುತ್ತಿದ್ದರು ಎಂದು ಅನಿಬೆಸೆಂಟ್ ಹೇಳುತ್ತಿದ್ದರು. 70 ನೇ ವಯಸ್ಸಿಗೆ ಮರಣ ಹೊಂದಿದ ಅಹಲ್ಯಬಾಯಿ ಯ ಉತ್ತರಾಧಿಕಾರಿಯಾಗಿ ತುಕೋಜಿ ರಾವ್ ಹೋಳ್ಕರ್ ಅಧಿಕಾರವಹಿಸಿಕೊಂಡ.

ಹೀಗೆ ಭಾರತದ ರಾಜಳ್ವಿಕೆಯ ಇತಿಹಾಸದಲ್ಲಿ ದಕ್ಷ ಆಡಳಿತಗಾರ್ತಿಯಾಗಿ ಸಾಮ್ರಾಜ್ಯವನ್ನು ಮುನ್ನಡೆಸಿದ ಧೀಮಂತ ಮಹಿಳೆ ಅಹಲ್ಯಬಾಯಿ ಹೋಳ್ಕರ್ ಸಾವಿರಾರು ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸುವ ಮತ್ತು ಪುನರೋತ್ತನಗೊಳಿಸುವ ಮೂಲಕ ಅಜರಾಮರಳಾಗಿದ್ದಾಳೆ.

– ಜಗದೀಶ್ ಬಳಂಜ

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published. Required fields are marked *