ಇಂದು ವರನಟ ಡಾ. ರಾಜ್‌ಕುಮಾರ್‌ ಅವರ 93ನೇ ಹುಟ್ಟುಹಬ್ಬ. ಅಭಿಮಾನಿಗಳ ಏಪ್ರಿಲ್‌ 24, 2021 ಪಾಲಿಗೆ ದೊಡ್ಡ ಹಬ್ಬ. ಅಭಿಮಾನಿಗಳನ್ನೇ ದೇವರೆಂದು ಕರೆದ ಮಹಾನ್‌ ವ್ಯಕ್ತಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.

ರಾಜ್‌ ಇವತ್ತು ನಮ್ಮ ಜೊತೆಗಿಲ್ಲದೇ ಇರಬಹುದು. ಆದರೆ, ಪ್ರತಿ ಅಭಿಮಾನಿಯ ಮನದಲ್ಲಿ ಕನ್ನಡ ನೆಲದ ಕಣಕಣದಲ್ಲೂ ಅವರ ಉಸಿರಿದೆ. ಅದೇ ಕಾರಣದಿಂದ ರಾಜ್‌ ಕುಮಾರ್‌ ಅಂದಿನಿಂದ ಇಂದಿನವರೆಗೆ ಎಲ್ಲಾ ತಲೆಮಾರುಗಳಿಗೆ ಪ್ರೇರಣೆಯಾಗುತ್ತಲೇ ಬಂದಿದ್ದಾರೆ.

ಕೊರೊನಾ ಲಾಕ್‌ಡೌನ್‌ ಇಲ್ಲದೇ ಇರುತ್ತಿದ್ದರೆ ಇಂದು ಡಾ. ರಾಜ್‌ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜ್‌ ಪುಣ್ಯಭೂಮಿಯಲ್ಲಿ ಆಚರಿಸುತ್ತಿದ್ದರು. ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ, ಈ ಕೊರೊನಾದಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಕುಟುಂಬ ವರ್ಗವಷ್ಟೇ ಪೂಜೆ ಸಲ್ಲಿಸಲಿದೆ.

ಇನ್ನು, ಕೊರೊನಾ ಕಾಟ ಇಲ್ಲದೇ ಇರುತ್ತಿದ್ದರೆ ಇಂದು ಕೆಲವು ಹೊಸ ಸಿನಿಮಾಗಳ ಮುಹೂರ್ತ ಕೂಡಾ ನಡೆಯಬೇಕಿತ್ತು. ಆದರೆ, ಅವೆಲ್ಲವೂ ಮುಂದಕ್ಕೆ ಹೋಗಿವೆ.

ಸಿನೆಮಾ – Udayavani – ಉದಯವಾಣಿ
Read More