ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,81,386 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 4,106 ಮಂದಿ ಮೃತಪಟ್ಟಿದ್ದಾರೆ. 3,78,741 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಪಾಸಿಟಿವ್ ಆದವರಿಗಿಂತ ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿದೆ. ಹಾಗೇ ನಿನ್ನೆಗಿಂತ ಇಂದು ಹೊಸ ಕೊರೊನಾ ಕೇಸ್​​ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.

ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,49,65,463 ಹಾಗೂ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,11,74,076. ಒಟ್ಟು 2,74,390 ಮಂದಿ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ 35,16,997 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೊನಾ ಅಂಕಿ-ಅಂಶಗಳು

  • ಒಟ್ಟು ಪ್ರಕರಣಗಳು- 2,49,65,463
  • ಒಟ್ಟು ಗುಣಮುಖರಾದವರು- 2,11,74,076
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರು- 2,74,390
  • ಸಕ್ರಿಯ ಪ್ರಕರಣಗಳು-36,18,458
  • ಈವರೆಗೆ ವ್ಯಾಕ್ಸಿನ್ ಪಡೆದವರು-18,29,26,460

The post ಇಂದು 2,81,386 ಹೊಸ ಕೊರೊನಾ ಕೇಸ್​​, ಒಂದೇ ದಿನ 3,78,741 ಮಂದಿ ಡಿಸ್ಚಾರ್ಜ್​​ appeared first on News First Kannada.

Source: newsfirstlive.com

Source link