ಬೆಂಗಳೂರು: ರಾಜ್ಯದಲ್ಲಿ ಇಂದು 15,586 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,17,427 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 13,30,013 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 32,218 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 23,67,742ಕ್ಕೆ ಏರಿಕೆಯಾಗಿದೆ.

ಇಂದು 52,581 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 18,29,276 ಮಂದಿ ಗುಣಮುಖರಾದಂತಾಗಿದೆ. ಇಂದು 353 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 24,207ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 5,14,238 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 9,591 ಹೊಸ ಪ್ರಕರಣಗಳು ದಾಖಲಾಗಿ, 129 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ 641, ಬಳ್ಳಾರಿಯಲ್ಲಿ 1,650, ಬೆಳಗಾವಿ 1,138, ದಕ್ಷಿಣ ಕನ್ನಡ 864, ಮೈಸೂರು 2,355, ಶಿವಮೊಗ್ಗ 892, ತುಮಕೂರು 1,773 ಹಾಗೂ ಉತ್ತರ ಕನ್ನಡದಲ್ಲಿ 768, ಉಡುಪಿ, 854, ಹಾಸನ 2,071 ಪ್ರಕರಣಗಳು ದಾಖಲಾಗಿವೆ.

The post ಇಂದು 52,581 ಸೋಂಕಿತರು ಗುಣಮುಖ.. 32,218 ಮಂದಿಗೆ ಪಾಸಿಟಿವ್ appeared first on News First Kannada.

Source: newsfirstlive.com

Source link