ಮೈಸೂರು: 25 ಕೋಟಿ ಆಸ್ತಿ ವಿಚಾರ ಇದೀಗ ಬೇರೆ ಯಾವುದೋ ವಿಚಾರವಾಗಿ ದಾರಿ ಹಿಡಿದಿದೆ. ಯಾರ್ ಯಾರೋ ಎಲ್ಲೆಲ್ಲಿಂದನೊ ಬಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇಂದೇ ಸ್ಟಿಂಗ್ ಆಪರೇಶನ್ ಮಾಡಿದ್ರು ನಾನು ಹೆದರಲ್ಲ ಎಂದು ದರ್ಶನ್ ಸವಾಲು ಹಾಕಿದ್ದಾರೆ.

ತಮ್ಮ ಫಾರ್ಮ್‍ಹೌಸ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್, ಆಸ್ತಿ ವಿಚಾರ ಇದೀಗ ಬೇರೆ ಎಲ್ಲೆಲ್ಲೋ ಹೋಗುತ್ತಿದೆ. ಆಸ್ತಿ ವಿಚಾರ ದೊಡ್ಮನೆ ಕಡೆಗೆ ತಿರುಗಿದ್ದು ಬೇಸರವಾಗಿದೆ. ನಮ್ಮ ಅಪ್ಪ ದೊಡ್ಮನೆಯಲ್ಲಿ ಅನ್ನ ತಿಂದಿದ್ದಾರೆ. ನಾನು ಕೂಡ ಅಲ್ಲಿಂದ ಅನ್ನ ತಿಂದು ಬೆಳೆದುಬಂದವನು. ಆಸ್ತಿ ವಿಷಯ ಅಲ್ಲಿವರೆಗೆ ಹೋಗಿರುವುದರಿಂದ ನಾನು ಮಾತನಡಲೇಬೇಕು ಎಂದು ಬಂದಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ

ದೊಡ್ಮನೆ ಆಸ್ತಿ ತೆಗೆಯುವಷ್ಟು ದೊಡ್ಡವರಲ್ಲ ನಾವು. ಈ ಊಹಾಪೋಹಗಳು ಬರುತ್ತಿದೆ. ಇಂದ್ರಜಿತ್ ಗಾಂಡುಗಿರಿ ಎಂದು ಹೇಳಿದ್ದಾರಲ್ವ, ಹಾಗಿದ್ರೆ ಅವರು ನಾನು ಮಾತನಾಡಿರುವ ಒಂದು ಆಡಿಯೋ ಇದೆ ಅದನ್ನು ತೆಗೆದು ಇಡ್ಲಿ. ಆಗ ಅವನು ನಿಜವಾಗಲೂ ಲಂಕೇಶ್‍ಗೆ ಹುಟ್ಟುದವರು ಇಲ್ಲದಿದ್ದರೆ ಗಾಂಡುಗಿರಿ ಯಾರು ಅಂತ ನೋಡೋಣ ಎಂದು ಸವಾಲೆಸೆದಿದ್ದಾರೆ.

ಉಮಾಪತಿ ಹೇಳಿದ್ದೇನು..?
ನಟ ದರ್ಶನ್, ಅರುಣಾ ಕುಮಾರಿ ಮತ್ತು ನಿರ್ಮಾಪಕ ಉಮಾಪತಿ ಲೋನ್ ಕದನಕ್ಕೆ ದರ್ಶನ್ ಮತ್ತು ಉಮಾಪತಿ ನಡುವಿನ ಆಸ್ತಿ ಜಗಳ ಕಾರಣನಾ ಅನ್ನೋ ಪ್ರಶ್ನೆಯೊಂದು ಮುನ್ನಲೆ ಬಂದಿತ್ತು. ಇಂದು ಉಮಾಪತಿ ಅವರೇ, ನನ್ನ ಬಳಿಯಲ್ಲಿರುವ ಪ್ರಾಪರ್ಟಿ ದರ್ಶನ್ ಕೇಳಿದ್ದು ನಿಜ, ನಾನು ಕೊಡಲ್ಲ ಅಂತ ಹೇಳಿರೋದು ಸಹ ನಿಜ ಅಂತ ಒಪ್ಪಿಕೊಂಡಿದ್ದರು. ನಾನು ಪ್ರಾಪರ್ಟಿ ಕೊಡಲ್ಲ ಅಂತ ಹೇಳಿದ್ಮೇಲೆ ದರ್ಶನ್ ಸುಮ್ಮನಾಗಿದ್ದರು. ಆದ್ರೆ ಈ ವಿಚಾರ ಮಾಧ್ಯಮಗಳಲ್ಲಿ ಬಂದಿದ್ದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ಅದು ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸೇರಿದ ಆಸ್ತಿ. ಸದ್ಯದ ಅದು ನನ್ನ ಬಳಿಯಲ್ಲಿದ್ದರಿಂದ ದರ್ಶನ್ ಕೇಳಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡೋದು ಉತ್ತಮ. ಅದು ದೊಡ್ಮನೆಯ ಆಸ್ತಿ ಎಂದರು. ಈ ವಿಷಯವಾಗಿ ದರ್ಶನ್ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಆ ಆಸ್ತಿಯನ್ನ ದರ್ಶನ್ ಅವರಿಗೆ ನೀಡಿದ್ರೆ ಅದು ಬೇರೆ ಆಯಾಮ ಪಡೆದುಕೊಳ್ಳುತ್ತೆ ಅಂತ ನೀಡಲಿಲ್ಲ ಎಂದು ಉಮಾಪತಿ ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

ಜೂನ್ 18ರಂದು ದರ್ಶನ್ ಮನೆಯಲ್ಲಿ ಸಭೆ ಸೇರಿದ್ದಾಗ ನನ್ನನ್ನೂ ಕರೆದಿದ್ರೆ ಇದು ಸಣ್ಣ ಮಟ್ಟದಲ್ಲಿಯೇ ಮುಗಿತಿತ್ತು. ಆದ್ರೆ ಅವರೆಲ್ಲ ಏನೋ ಮಾಡೋಕೆ ಹೊರಟಂತಿದೆ. ಹಾಗಾಗಿ ನಾನು ಕಾನೂನು ಮೂಲಕವಾಗಿಯೇ ಹೋರಾಟ ನಡೆಸುತ್ತೇನೆ. ಮಾಧ್ಯಮಗಳ ಮುಂದೆ ನಾನು ಒಬ್ಬನೇ ಬಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡೋಕೆ ಕಾರಣ ಸತ್ಯ. ಇಂದ್ರಜಿತ್ ಲಂಕೇಶ್ ಬಳಿ ಸಹಾಯ ಪಡೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಇಲ್ಲಿಯರೆಗೂ ಒಬ್ಬನೇ ಹೋರಾಟ ನಡೆಯುತ್ತಿದ್ದು, ಮುಂದುವರಿಯಲಿದೆ. ಬ್ಲ್ಯಾಕ್‍ಮೇಲ್ ಮಾಡಿಸಿಕೊಳ್ಳುವಂತೆ ವ್ಯಕ್ತಿ ಅಲ್ಲ. ನನ್ನ ಮೇಲೆ ಆರೋಪ ಮಾಡಿರೋ ಸಾಚಾಗಳಾ ಎಂದು ಪ್ರಶ್ನೆ ಮಾಡಿದ್ದರು.  ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

The post ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್ appeared first on Public TV.

Source: publictv.in

Source link