ಬೆಂಗಳೂರು: ಸ್ಯಾಂಡಲ್‍ವುಡ್ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರದ ನಡುವೆ ಇದೀಗ ಇಂದ್ರಜಿತ್ ಗೆ ಬೆದರಿಕೆ ಕರೆಗಳು ಬರಲು ಆರಂಭಿಸಿವೆ.

ಈ ಸಂಬಂಧ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಕಳೆದ 24 ಗಂಟೆಗಳಿಂದ ಫೋನ್ ಕರೆಗಳು ನಿರಂತರವಾಗಿ ಬರುತ್ತಿವೆ. ಈ ಮೂಲಕ ದರ್ಶನ್ ಹಿಂಬಾಲಕರು ದುರ್ವರ್ತನೆ ತೋರುತ್ತಿದ್ದಾರೆ. 30 ರಿಂದ 35 ಜನರಿಂದ ರಾತ್ರಿ ಹಗಲು ಫೋನ್ ಮಾಡ್ತಿದ್ದಾರೆ ಎಂದು ದೂರಿದ್ದಾರೆ.

ಬೆದರಿಕೆ ಕರೆಗಳು ಬರುತ್ತಿದೆ. ಒಂದು ಮಾಧ್ಯಮದಲ್ಲಿ ನಾವು ಹೇಗೆ ಕೆಲಸ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ 30 ಜನ ಪದೇಪದೇ ಫೋನ್ ಮಾಡುತ್ತಾರೆ. ಹೀಗಾಗಿ ನಂಬರ್ ಸಮೇತ ಸೈಬರ್ ಕ್ರೈಂಗೆ ದೂರು ನೀಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಚ್ಚೆಗೆ ಕಲ್ಲು ಹಾಕಲ್ಲ, ಮೆಂಟಲಿ ಡಿಸ್ಟರ್ಬ್ ಅದಾಗ ಟ್ರಿಟ್ಮೆಂಟ್ ತಗೊಳೋದು ಒಳ್ಳೆಯದು: ಇಂದ್ರಜಿತ್ ಲಂಕೇಶ್

ನಟ ದರ್ಶನ್ ಹಿಂದೆ ರೌಡಿಗಳಿದ್ದಾರೆ. ಈ ಬೆದರಿಕೆಗಳಿಗೆ ನಾನು ಬಗ್ಗಲ್ಲ. 30 ಸೆಕೆಂಡಿಗೊಮ್ಮೆ ದರ್ಶನ್ ಹಿಂಬಾಲಕರಿಂದ ಕರೆಗಳು ಬರುತ್ತಿವೆ. ವಾಟ್ಸಪ್ ಮೂಲಕ ಅಶ್ಲೀಲ ಪೋಸ್ಟರ್ ಗಳು ಬರುತ್ತಿವೆ. ಅಲ್ಲದೆ ಪ್ರಸಾರ ಮಾಡಲು ಯೋಗ್ಯವಲ್ಲದ ಪದಗಳು ಬರುತ್ತಿವೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

The post ಇಂದ್ರಜಿತ್‍ಗೆ ಬೆದರಿಕೆ ಕರೆ – ದರ್ಶನ್ ಹಿಂಬಾಲಕರ ವಿರುದ್ಧ ದೂರಿಗೆ ನಿರ್ಧಾರ appeared first on Public TV.

Source: publictv.in

Source link