ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಅಪ್ಪನಿಗೆ ಹುಟ್ಟಿದವರೇ ಆಗಿದ್ದರೆ ಅವರು ದಾಖಲೆ ರಿಲೀಸ್ ಮಾಡಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೇರ ಸವಾಲ್ ಹಾಕಿದ್ದಾರೆ.

ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದ್ರಜಿತ್ ಗಾಂಡುಗಿರಿ ಅಂತ ನನ್ನ ವಿರುದ್ಧ ಪದ ಬಳಕೆ ಮಾಡಿದ್ದಾರೆ. ನಮ್ಮಪ್ಪ ಗಂಡು ಮಗ ಅಂತ ಹೆತ್ತು ಸಾಕಿದ್ದಾರೆ. ಇಂದ್ರಜಿತ್ ಅವರು ಎಷ್ಟು ಬೇಕಾದರೂ ದಾಖಲೆ ರಿಲೀಸ್ ಮಾಡಲಿ. ನಾನು ಕೇರ್ ಮಾಡಲ್ಲ. ದೊಡ್ಮನೆ ಅನ್ನ ತಿಂದು ಬಂದಿರೋದು ನಾವು. ದೊಡ್ಮನೆಯಲ್ಲಿ ನಮ್ಮಪ್ಪ ಅನ್ನ ತಿಂದಿದ್ದಾರೆ. ನಾನು ಕೂಡ ದೊಡ್ಮನೆ ಕುಟುಂಬದಲ್ಲಿಯೇ ಬೆಳೆದಿದ್ದೇನೆ. ನಾನೇನು ಮರ್ಡರ್ ಮಾಡಿದ್ದೇನಾ ಎಂದು ಪ್ರಶ್ನಿಸಿದರು.

ಒಂದಕ್ಕೊಂದು ವಿವಾದಗಳು ಹುಟ್ಟುತ್ತಿವೆ. ರಾಜ್ ಕುಮಾರ್ ಕುಟುಂಬಕ್ಕೂ ಆಸ್ತಿ ವಿವಾದಕ್ಕೂ ಸಂಬಂಧವಿಲ್ಲ. ಉಮಾಪತಿ ಬೇಕುಂತಲೇ 25 ಕೋಟಿ ರೂ. ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಜೋಗಿ ಪ್ರೇಮ್ ಕಡೆಯಿಂದ ಉಮಾಪತಿ ಪರಿಚಯವಾಗಿದೆ. ಒಂದು ಸಿನಿಮಾ ಮಾಡೋಣ ಅಂತ ಹೇಳಿದ್ರು ಅಂದ್ರು.

ಉಮಾಪತಿ ಬಳಿ ನಾನು ಪ್ರಾಪರ್ಟಿ ಕೇಳಿಲ್ಲ. ಅವರಿಗೆ ನಾನು ಫೋನ್ ಮಾಡಿಲ್ಲ. 70 ದಿನದ ಬಳಿಕ ನಾನು ಯಾರಿಗೂ ಡೇಟ್ ಕೊಡಲ್ಲ. ನಾವೆಲ್ಲ ಮೂರು ಬಿಟ್ಟು ನಿಂತವೇ ಆಗಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

The post ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್ appeared first on Public TV.

Source: publictv.in

Source link