ಮೈಸೂರು: ಮಾಧ್ಯಮಗಳಿಗೆ ಲಭ್ಯವಾಗಿದ್ದ ಆಡಿಯೋ ಸಂಭಾಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಸಂದೇಶ್ ನಾಗರಾಜ್.. ಇಂದ್ರಜಿತ್ ಜೊತೆ ನನ್ನ ಮಗ ಸಂದೇಶ್ ಮಾತನಾಡಿಲ್ಲ.. ಆಡಿಯೋದಲ್ಲಿರುವ ಧ್ವನಿ ಸಂದೇಶ್​ದಲ್ಲ ಎಂದಿದ್ದಾರೆ.

ಇದನ್ನೂ ಓದಿ: ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..?

ಈ ಗೊಂದಲದಿಂದಾಗಿ ಸಂದೇಶ್​ರನ್ನ ಒಂದು ವಾರಗಳ ಕಾಲ ಬೆಂಗಳೂರಿಗೆ ಕಳುಹಿಸುತ್ತಿದ್ದೇನೆ. ಇಂದ್ರಜಿತ್ ಆರೋಪಿಸಿರುವ ಎಲ್ಲವೂ ಸುಳ್ಳು. ಇಂದ್ರಜಿತ್ ಹೇಳಿರುವ ಐದು ಅಂಶಗಳು‌ ಕೂಡ ಸುಳ್ಳು, ದಯವಿಟ್ಟು ಇದನ್ನ ಇಲ್ಲಿಗೇ ಬಿಟ್ಟುಬಿಡಿ. ಈಗಾಗಲೇ ಇಬ್ಬರು ಗ್ರಾಹಕರು ಹೋಟೆಲ್​ನಿಂದ ತೆರಳಿದ್ದಾರೆ. ಇದು ಹೋಟೆಲ್ಲಾ ಅಥವಾ ಪೋಲೀಸ್ ಸ್ಟೇಷನ್ನಾ ಎಂದು ಬೇಸರ ಮಾಡಿಕೊಂಡು‌ ಹೊರಟಿದ್ದಾರೆ. ನಮ್ಮದು ಹೊಟ್ಟೆ ಪಾಡು, ದಯವಿಟ್ಟು ಸಹಕರಿಸಿ ಎಂದು ಸಂದೇಶ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

The post ಇಂದ್ರಜಿತ್ ಜೊತೆ ನನ್ನ ಮಗ ಮಾತನಾಡಿಲ್ಲ.. ಆಡಿಯೋದಲ್ಲಿರುವ ಧ್ವನಿ ಅವನದಲ್ಲ- ಸಂದೇಶ್ ನಾಗರಾಜ್ appeared first on News First Kannada.

Source: newsfirstlive.com

Source link