ಇಂಧನ ಕೊರತೆಯಿಂದ ಪವರ್​ ಸ್ಟೇಷನ್ಸ್ ಬಂದ್.. ಸಂಪೂರ್ಣ ಕತ್ತಲಲ್ಲಿ ಮುಳುಗಿದ ಲೆಬನಾನ್

ನವದೆಹಲಿ: ಲೆಬನಾನ್ ಹಲವು ದುರಂತಗಳಿಗೆ ಸಾಕ್ಷಿಯಾದ ದೇಶ. ಇದೀಗ ಮತ್ತೊಂದು ದುರಂತಕ್ಕೆ ಲೆಬನಾನ್ ಒಳಗಾಗಿದ್ದು ವಿದ್ಯುತ್ ಇಲ್ಲದೇ ಹಲವು ದಿನಗಳ ಕಾಲ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

ಲೆಬನಾನ್​ನ ಎರಡು ಪ್ರಮುಖ ಪವರ್​ ಸ್ಟೇಷನ್​ಗಳಾದ ಡೇಯ್ರ್ ಅಮ್ಮರ್ ಮತ್ತು ಜಹ್ರಾನಿ ಸ್ಟೇಷನ್​ಗಳು ಇಂಧನ ಕೊರತೆಯಿಂದಾಗಿ ಇಂದು ಮಧ್ಯಾಹ್ನ ಅಧಿಕೃತವಾಗಿ ಕೆಲಸ ನಿಲ್ಲಿಸಿವೆ. ಇದರಿಂದಾಗಿ ಇಡೀ ಲೆಬನಾನ್ ಇದೀಗ ಸಂಪೂರ್ಣ ವಿದ್ಯುತ್ ಸಂಪರ್ಕ ಕಳೆದುಕೊಂಡು ಕಗ್ಗತ್ತಲಿಗೆ ಜಾರಿದೆ. ಕೆಲವು ದಿನಗಳ ಕಾಲ ಈ ಪವರ್​ ಸ್ಟೇಷನ್​ಗಳು ಬಂದ್ ಆಗಿಯೇ ಇರಲಿವೆ ಎನ್ನಲಾಗಿದೆ.

ಇನ್ನು ವಿದ್ಯುತ್ ಇಲ್ಲದ ಕಾರಣ ಅರ್ಧಕ್ಕರ್ಧ ಜನಸಂಖ್ಯೆ ನಿರುದ್ಯೋಗಿಗಳಾಗಿದ್ದಾರೆ. ಮತ್ತು ಅಲ್ಲಿನ ಕರೆನ್ಸಿ ಬೆಲೆಯೂ ಸಹ ಇಳಿಕೆ ಕಂಡಿದೆ. ಇನ್ನು ಕೆಲವರು ವಿದ್ಯುತ್​ಗಾಗಿ ಡೀಸೆಲ್ ಮಷಿನ್​ಗಳ ಮೊರೆಹೋಗಿದ್ದು ತೈಲದ ಬೆಲೆಯೂ ಸಹ ಗಗನಕ್ಕೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಭಾರತದಲ್ಲೂ ಕಲ್ಲಿದ್ದಲು ಕೊರತೆ ಎದುರಾಗಿದ್ದು ಕೆಲವು ವಿದ್ಯುತ್ ತಯಾರಕಾ ಘಟಕಗಳು ಕೆಲಸ ನಿಲ್ಲಿಸಿವೆ. ದೇಶದಾದ್ಯಂತ ವಿದ್ಯುತ್ ಅಭಾವ ಎದುರಾಗುವ ಆತಂಕವಿದೆ.

News First Live Kannada

Leave a comment

Your email address will not be published. Required fields are marked *